ಹಾವೇರಿ, ಡಿ. 23 : ರಾಷ್ಟ್ರೀಯ ರೈತರ ದಿನಾಚರಣೆ ದಿನ. ವರ್ಷವಿಡೀ ಕೆಲಸ ಮಾಡುವ ಅನ್ನದಾತರ ದಿನ. ಅದೆಷ್ಟು ರೈತರಿಗೆ ರೈತ ದಿನ ಅನ್ನೋದು ಗೊತ್ತಿಲ್ಲ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಸುರೇಶ್ ಕುಮಾರ್ ಹಾವೇರಿ ತಾಲೂಕು ನೆಲೋಗಲ್ಲ ಗ್ರಾಮದ ಪ್ರೌಢ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಚನ್ನಬಸನಗೌಡ ಹೊಂಬರಡಿಗೆ ಶಾಲು ಹೊದಿಸಿ ನಮನ ಸಲ್ಲಿಸಿದ್ದಾರೆ. ಅಲ್ಲದೆ ಆ ಪೋಟೋವನ್ನ ತಮ್ಮ ಫೇಸ್‍ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
.