ಕುತ್ತಿಗೆ ನೋವಿಗೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಕುತ್ತಿಗೆ ನೋವಿಗೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಬೆಂಗಳೂರು: ಇತ್ತೀಚಿನ ಜೀವನದಲ್ಲಿ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆದರಿಂದ ನಮಗೆ ಏನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳುವುದಿಲ್ಲ.
ಕುತ್ತಿಗೆ ನೋವು ಎಂದರೆ ತಲೆಯ ಕೆಳಗೆ ಬೆನ್ನುಮೂಳೆ ಹಾಗೂ ಅದರ ಸುತ್ತಲಿನ ನೋವು ಆಗಿದೆ. ಇದನ್ನು ಸರ್ವಿಕಲ್ಜಿಯಾ ಎಂದೂ ಕರೆಯುತ್ತಾರೆ. ಕುತ್ತಿಗೆಯನ್ನು ಸರ್ವಿಕಲ್ ಸ್ಪೈನ್ ಎನ್ನುತ್ತಾರೆ. ಕುತ್ತಿಗೆ ನೋವು ವಿವಿಧ ಗಾಯ ಮತ್ತು ವೈದ್ಯಕೀಯ ಪರಿಸ್ಥಿತಿಯಿಂದ ಉಂಟಾಗುತ್ತದೆ ಅಂತಾರೆ ತಜ್ಞರು.
ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಬಿಟ್ಟರೆ ಕುತ್ತಿಗೆ ನೋವು ಹೆಚ್ಚುತ್ತದೆ. ಇದು ದೈನಂದಿನ ಚಟುವಟಿಕೆಗೆ ಅಡ್ಡಿ ಮಾಡುತ್ತದೆ. ಇದು ಜೀವನದ ಗುಣಮಟ್ಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಕುತ್ತಿಗೆ ನೋವು ಹೆಚ್ಚಾಗಲು ಹಲವು ಕಾರಣಗಳಿವೆ. ಕುತ್ತಿಗೆ ನೋವನ್ನು ನೋವಿನ ಔಷಧಿ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆ ಮೂಲಕ ಚಿಕಿತ್ಸೆ ನೀಡಬಹುದು. ಕುತ್ತಿಗೆ ನೋವಿಗೆ ಮುಖ್ಯ ಕಾರಣಗಳಿವೆ. ಕೆಟ್ಟ ಭಂಗಿ, ವಯಸ್ಸಾಗುವಿಕೆ, ದೈಹಿಕ ಒತ್ತಡ, ಮಾನಸಿಕ ಒತ್ತಡ, ಗಾಯ, ಕುತ್ತಿಗೆ ನೋವಿಗೆ ಕಾರಣವಾಗುತ್ತದೆ.
ಕುತ್ತಿಗೆ ನೋವಿಗೆ ಕೆಲವು ನೈಸರ್ಗಿಕ ಚಿಕಿತ್ಸೆ ಮಾಡಿ. ಕುತ್ತಿಗೆ ನೋವು ಇದ್ದಾಗ ಬಿಸಿ ನೀರಿನ ಸ್ನಾನ ಮಾಡಿ. ಪ್ರತಿ ಕೆಲವು ಗಂಟೆಗಳಿಗೊಮ್ಮೆ 15 ನಿಮಿಷ ಕುತ್ತಿಗೆ ನೋವಿನ ಪ್ರದೇಶದಲ್ಲಿ ಬೆಚ್ಚಗಿನ ಟವೆಲ್ ಅಥವಾ ಹೀಟಿಂಗ್ ಪ್ಯಾಡ್ ಇರಿಸಿ. ಶಾಖವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ರಕ್ತದ ಹರಿವನ್ನು ಉತ್ತೇಜಿಸುತ್ತದೆ.
ಕುತ್ತಿಗೆ ನೋವು ನಿವಾರಣೆ ಮಾಡುವ ವ್ಯಾಯಾಮ ಮಾಡಿ. ಒತ್ತಡ ಕಡಿಮೆ ಮಾಡಲು ಮೈಂಡ್ಫುಲ್ನೆಸ್, ಧ್ಯಾನ, ಉಸಿರಾಟದ ವ್ಯಾಯಾಮ, ಯೋಗ ಮಾಡಿ. ಇದು ಒತ್ತಡ ನಿವಾರಿಸುತ್ತದೆ. ಕುತ್ತಿಗೆ ನೋವು ಕಡಿಮೆ ಮಾಡುತ್ತದೆ. ವೈದ್ಯರ ಸಲಹೆ ಮೇರೆಗೆ ನೋವು ನಿವಾರಕ ಸಹ ತೆಗೆದುಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos