ಐರ್ಲೆಂಡ್, ಡಿ. 26 : ಇಲ್ಲಿನ ಮೃಗಾಲಯವೊಂದರಲ್ಲಿ ತಂದೆ ತನ್ನ ಮಗನನ್ನು ಕ್ಯಾಮೆರಾದಲ್ಲಿ ಸಾಮಾನ್ಯ ವೀಡಿಯೊದಂತೆ ಸೆರೆಹಿಡಿಯುವ ವೇಳೆಯಲ್ಲಿ ಹುಲಿ ಒಮ್ಮಿಂದೊಮ್ಮೆಲೆ ಬಾಲಕನ ಮೇಲೆ ಎರಗಲು ಯತ್ನಿಸುತ್ತಿರುವ ದೃಶ್ಯವು ಈಗ ಎಲ್ಲೆಡೆ ವೈರಲ್ ಆಗಿದೆ.
ಈ ವಿಡಿಯೋ ರಾಬ್ಸಿ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಪ್ರಕಟವಾಗಿದ್ದು, ಹುಡುಗನ ತಂದೆಯು ಡಿಸೆಂಬರ್ 23 ರಂದು ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Same day! My daughter and 2 nephews would be tasty little morsels for this poor hungry kitty! #dublinzoo #rte @rtenews @rte @DublinZoo pic.twitter.com/0pGFMdBI7V
— Paul Moran Martial Arts (@pmmartialarts) December 23, 2019
ಅಲ್ಲದೇ, ನನ್ನ ಮಗ ಇಂದು ಡಬ್ಲಿನ್ ಮೃಗಾಲಯದ ಮೆನುವಿನಲ್ಲಿದ್ದನು ಎಂದು ಅವರು ಬರೆದುಕೊಂಡಿದ್ದರು.
ಈ ವೀಡಿಯೊದಲ್ಲಿ, ಗಾಜಿನ ಆವರಣದ ಮೂಲಕ ಸಂದರ್ಶಕರಿಂದ ಬೇರ್ಪಟ್ಟ ಹುಲಿಯನ್ನು ಡಬ್ಲಿನ್ ಮೃಗಾಲಯದಲ್ಲಿ ಚಿತ್ರೀಕರಿಸಲಾಗಿದ್ದು, ಹುಡುಗ ಗಾಜಿನ ಪಕ್ಕದಲ್ಲಿ ಪೋಸ್ ನೀಡುತ್ತಿದ್ದಂತೆ ಹುಲಿ ನಿಧಾನವಾಗಿ ಅವನ ಹತ್ತಿರ ಬರುತ್ತಿತ್ತು. ಹುಡುಗ ಹಿಂದೆ ನೋಡಿ ಶಾಂತವಾಗಿ ಕುಳಿತಿಕೊಳ್ಳುತ್ತಾನೆ. ಮತ್ತೆ, ಹುಡುಗ ಹುಲಿ ಕಡೆ ನೋಡಿ ಮರಳಿ ಕುಳಿತುಕೊಳ್ಳುವಾಗ ಕೂಡಲೇ ಹುಲಿ ಅವನ ಕಡೆಗೆ ಓಡಿ ಕಿಟಕಿಯ ಗೋಡೆಗೆ ಎರಗಿದೆ.