ಕೋಳಿಗೂ ಟಿಕೆಟ್ ನೀಡಿದ ಬಸ್ ಕಂಡಕ್ಟರ್

ಕೋಳಿಗೂ ಟಿಕೆಟ್ ನೀಡಿದ ಬಸ್ ಕಂಡಕ್ಟರ್

ಕೋಲಾರ, ಮೇ. 10,ನ್ಯೂಸ್ ಎಕ್ಸ್ ಪ್ರೆಸ್: ಜಿಲ್ಲೆಯ ಮುಳಬಾಗಿಲು ಘಟಕದ ಸರ್ಕಾರಿ ಕೆಎಸ್ಆರ್ ಟಿಸಿ ಬಸ್ ನಲ್ಲಿ ಕೋಳಿಗೆ ನಿರ್ವಾಹಕ ಟಿಕೆಟ್ ನೀಡಿದ್ದು, ಆದ್ದರಿಂದ ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆಯೇ ಕೂರಿಸಿ ಪ್ರಯಾಣಿಸಿದ್ದಾನೆ.

ಹೌದು,ಕೋಲಾರದಿಂದ ಎಚ್. ಕ್ರಾಸ್ ಗೆ ಹೋಗುವ ಪ್ರಯಾಣಿಕ ತನ್ನ ಜೊತೆ ಕೋಳಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಸ್ ಕಂಡಕ್ಟರ್ ಕೋಳಿಗೂ 15 ರೂ. ಟಿಕೆಟ್ ನೀಡಿದ್ದಾರೆ.

ಆದ್ದರಿಂದ ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆಯೇ ಕೂರಿಸಿ ಪ್ರಯಾಣಿಸಿದ್ದಾನೆ. ನಂತರ ಸಹ ಪ್ರಯಾಣಿಕ ಕೋಳಿಯನ್ನು ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದ್ದಾನೆ. . ಇದಕ್ಕೆ ಉತ್ತರಿಸಿದ ಕೋಳಿ ಮಾಲೀಕ ಕೋಳಿಗೆ ನಾನು ಟಿಕೆಟ್ ತೆಗೆದುಕೊಂಡಿದ್ದೇನೆ, ಹಾಗಾಗಿ ಕೋಳಿಯೂ ನನ್ನ ಜೊತೆ ಸೀಟ್ ನಲ್ಲಿಯೇ ಕುಳಿತು ಬರಲಿದೆ ಎಂದು ವಾದಿಸಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos