ಬೆಂಗಳೂರು: ಕಾವೇರಿ ನದಿ ವಿಚಾರ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ ಇದು ನಮ್ಮ ಜನ್ಮ ಸಿದ್ಧ ಹಕ್ಕು ರಕ್ತಕೊಟ್ಟೆವು ನೀರು ಕೊಡಲಾರೆವು ಎನ್ನುವ ಘೋಷಣಾ ವಾಕ್ಯದೊಂದಿಗೆ ಬೆಂಗಳೂರು ಬಂದ್ ನಡೆಯುತ್ತಿದ್ದು, ಬೆಂಗಳೂರಿನಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಪ್ರತಿಭಟನಾ ಧರಣಿ ನಡೆಸುತ್ತಿದ್ದ ವೇಳೆ ರೈತನೋರ್ವ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ನಡೆದಿದೆ. ತಕ್ಷಣ ರೈತನನ್ನು ಪೊಲೀಸರು ರಕ್ಷಿಸಿ ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೆಂಗಳೂರು ಹೃದಯ ಭಾಗ ಮೆಜೆಸ್ಟಿಕ್, ಗಾಂಧಿನಗರ,ಸುತ್ತಮುತ್ತ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು ಬಿಎಂಟಿಸಿ ಸಂಚರಿಸುತ್ತಿವೆ. ಆದರೆ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು ಮೆಜೆಸ್ಟಿಕ್ನಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಂಚಾರ ಶುರುವಾದರೂ ಪ್ರಯಾಣಿಕರು ಇತ್ತ ಕಡೆ ತಿರುಗಿ ಸಹ ನೋಡದೆ ಇದ್ದಾರೆ. ಹೀಗಾಗಿ ಬಸ್ ನಿಲ್ದಾಣಗಳಲ್ಲಿ ಬಸ್ಗಳು ನಿಂತಲ್ಲೇ ನಿಂತಿವೆ. ಇಡೀ ಬಸ್ ನಿಲ್ದಾಣಗಳು ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿಗಾರ
ಎ ಚಿದಾನಂದ