ಬೆಂಗಳೂರು, ಅ. 15: ಸಾಮಾನ್ಯವಾಗಿ ಎಲ್ಲರು ಈರುಳ್ಳಿಯನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ಬಳಸುತ್ತಾರೆ. ಹೌದು, ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಸ್ತನ ಕ್ಯಾನ್ಸರ್ನಂತಹ ಮಾರಕ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.
ಕಚ್ಚಾ ಈರುಳ್ಳಿಯನ್ನು ಪ್ರತಿದಿನ ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಹಳ ಕಡಿಮೆ ಇರುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಕಚ್ಚಾ ಈರುಳ‍್ಳಿಯಿಂದ ಮಾಡಿದ ಚಟ್ನಿ ದಿನಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸಿದ ಮಹಿಳೆಯರು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 67 ರಷ್ಟು ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಸ್ತನ ಕ್ಯಾನ್ಸರ್ನಂತಹ ಮಹಾಮಾರಿಯ ಅಪಾಯವನ್ನ ತಪ್ಪಿಸಲು ನೀವು ನಿಮ್ಮ ದೈನಂದಿನ ಆಹಾರದಲ್ಲಿ ಕಚ್ಚಾ ಈರುಳ್ಳಿಯನ್ನು ಸೇರಿಸಿಕೊಳ್ಳಬೇಕು. ಅವುಗಳನ್ನು ನಿಮ್ಮ ಆಹಾರದಲ್ಲಿ ಸಲಾಡ್ ಆಗಿಯು ಸಹ ಸೇವಿಸಬಹುದು ಎಂದು ತಿಳಿದು ಬಂದಿದೆ.