ಗೋರಖ್ಪುರ, ಡಿ.26 : ಪಾಶ್ಚಿಮಾತ್ಯ ದೇಶಗಳಲ್ಲಿ ತೃತೀಯ ಗಿಗಳಿಗೆ (ಟ್ರಾನ್ಸ್ ಜಂಡರ್) ಎಲ್ಲ ಕ್ಷೇತ್ರಗಳಲ್ಲಿ ಲಭಿಸುತ್ತಿರುವ ಮಾನ್ಯತೆ ಈಗ ಭಾರತದಲ್ಲೂ ದೊರೆಯುತ್ತಿದೆ. ಸ್ಪಷ್ಟ ನಿದರ್ಶನ ಇಲ್ಲಿದೆ. ಉತ್ತರ ಪ್ರದೇಶದ ಕುಶಿನಗರ ಜಿಲ್ಲಾಯಲ್ಲಿ ತೃತೀಯ ಲಿಂಗಿಗಳಿಗಾಗಿ ದೇಶದ ಮೊದಲ ವಿಶ್ವವಿದ್ಯಾಲಯ ಆರಂಭವಾಗಲಿದೆ. ಒಂದನೆ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವ್ಯಾಸಂಗ ಮಾಡಲು ಇಲ್ಲಿ ಅವಕಾಶವಿದೆ. ಅಲ್ಲದೆ, ಸಂಶೋಧನೆ, ಪಿಹೆಚ್ಡಿ ಪದವಿ ಕೂಡ ಮಾಡಬಹುದಾಗಿದೆ.
ಕುಶಿನಗರದ ಪಾಜಿಲ್ ನಗರ ಬ್ಲಾಕ್ನಲ್ಲಿ ಅಖಿಲ ಭಾರತೀಯ ಕಿನ್ನಾರ್ ಶಿಕ್ಷ ಸೇವಾ ಟ್ರಸ್ಟ್ ನಿಂದ (ಅಖಿಲ ಭಾರತ ತೃತೀಯ ಲಿಂಗಿಗಳ ಶಿಕ್ಷಣ ಸೇವಾ ಟ್ರಸ್ಟ್ ) ಈ ವಿಶ್ವವಿದ್ಯಾಲಯ ಆರಂಭಿಸಲಿದೆ. ತೃತೀಯ ಲಿಂಗಿಗಳು ಶಿಕ್ಷಣ ಪಡೆಯಲು ಸ್ಥಾಪನೆಯಾಗುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯ ಇದಾಗಿದ್ದು, ಬರುವ ಜನವರಿ 15ರಿಂದ ಈ ಸಮುದಾಯದ ಇಬ್ಬರು ತೃತೀಯ ಲಿಂಗಿಗಳಿಗೆ ಪ್ರವೇಶ ನೀಡಲಾಗುತ್ತಿದೆ.