ಧಾರವಾಡ, ಜ. 26: ಕುದುರೆ ಇಷ್ಟು ದಿನ ತಾನೇ ರಾಜ ಎಂದು ಓಡಾಡಿಕೊಂಡು ಆರಾಮಾಗಿತ್ತು. ಆದ್ರೆ ಕುದುರೆಗೆ ಒಂದು ಸಮಸ್ಯೆ ಬಂದಿದ್ದರಿಂದ, ಓಡಾಡುವುದು ಕಷ್ಟವಾಗಿತ್ತು. ಇದು ಎಷ್ಟರ ಮಟ್ಟಿಗೆ ಎಂದ್ರೆ, ಕೊನೆಗೆ ಕುದುರೆ ಜೀವಕ್ಕೆನೆ ಅಪಾಯ ಇತ್ತು. ಏನ್ ಮಾಡೊದು ಮುಂದೆ ಎನ್ನುವ ಕುದುರೆಗೆ ಇದೀಗ, ಭರವಸೆ ಮೂಡಿದೆ. ತನಗೆ ಒದಗಿ ಬಂದ ಆಪತ್ ಕಾಲವನ್ನು ಕುದುರೆ ಇದೀಗ ದಾಟಿ ನಡೆದಿದೆ ಅದಕ್ಕೆ ಕಾರಣ ಕುದುರೆ ಕಣ್ಣಿಗೆ ಆಪರೇಶನ ಯಶಸ್ವಿಯಾಗಿ ಮಾಡಿದ ಪಶುವೈದ್ಯ ಡಾ.ಅನೀಲಕುಮಾರ ಪಾಟೀಲ್ ಎಂದರೆ ತಪ್ಪಾಗಲಾರದು.
ಹೌದು ಇದು ಕಾಟೆವಾಡಿ ಕುದುರಿ. ಸುಮಾರು 7ವರ್ಷದ ಕುದುರೆ ಇಷ್ಟು ದಿನ ಚೆನ್ನಾಗಿಯೇ ಓಡಾಡಿಕೊಂಡು ಇತ್ತು. ಆದ್ರೆ ಕೆಲವು ದಿನಗಳ ಹಿಂದೆಯಷ್ಟೇ ಕುದುರೆಗೆ ದೊಡ್ಡದಾದ ಸಮಸ್ಯೆ ಎದುರಾಗಿ ಜೀವಕ್ಕೆನೆ ಅಪಾಯ ಬಂದಿತ್ತು. ಹುಬ್ಬಳ್ಳಿಯ ರಜನಿ ಬಿಜವಾಡ ಅವರು ಈ ಕುದುರೆಯನ್ನು ಸಾಕಿದ್ದಾರೆ. ಕೆಲವು ದಿನಗಳ ಹಿಂದೆ ಕುದುರೆ ಕಣ್ಣಿನಲ್ಲಿ 1 ಬಿಳಿ ಬಣ್ಣದಾದ ಹುಳು ಕಾಣಿಸಿಕೊಂಡಿತ್ತು. ಇದರ ವಿಡಿಯೋ ಒಂದನ್ನು ವೈದ್ಯರ ಬಳಿ ತೋರಿಸಿದಾಗ ಕುದುರೆಗೆ ಆಪರೇಶನ್ ಮಾಡವುದು ಅನಿವಾರ್ಯ ಎಂದಿದ್ದರು ಪಶು ವೈದ್ಯರು. ಅಷ್ಟೊಂದು ಸಮಸ್ಯೆ ಕುದುರುರೆ ಕಣ್ಣಿಗೆ ಕಾಡಿತ್ತು. ಕುದುರೆಯ ಬಲಗಣ್ಣು ಬಿಳಿಯಾಗಿ, ಕಣ್ಣೀರು ನಿರಂತರವಾಗಿ ಬರ್ತಾ ಇತ್ತು. ಹೀಗಾಗಿ ವೈದ್ಯರ ಬಳಿ ಚೆಕಅಪ್ ಮಾಡಿಸಿದ್ದರು.
ಕುದುರುಗೆ ಅರವಳಿಕೆ ನೀಡಿ, ಸುಮಾರು 20 ನಿಮಿಷಗಳ ಕಾಲ ಶಸ್ತ್ರಚಿಕೆತ್ಸೆ ಮಾಡಿದ್ರು. ಕುದುರೆ ಕಣ್ಣಿನಲ್ಲಿರುವ ಜಂತುಹುಳುವನ್ನು ತೆಗೆದ್ರು. ಸೆಟೆರಿಯಾ ಇಕ್ವ್ಯಾನಾ (ಒಂದು ಜಂತು ಹುಳುವಿನ ಮರಿ) ಇದು. ಇವು ರಕ್ತನಾಳದಲ್ಲಿ ಇರ್ತಾವೆ. ಅವುಗಳನ್ನು ತೆಗೆಯದೇ ಹೊದ್ರೆ ಕುದರೆಯ ಜೀವಕ್ಕೆ ಅಪಾಯ ಹೀಗಾಗಿ ಅನಿವಾರ್ಯವಾಗಿ ಆಪರೇಶನ್ ಮಾಡಬೇಕಾಗಿ ಬಂತು.
ಕರ್ನಾಟಕದಲ್ಲಿ ಇಂತಹ ಪ್ರಕರಣ ಕಡಿಮೆ ಇದ್ದು, ರಾಜಸ್ತಾನದ ಕಡೆ ಇಂತಹ ಪ್ರಕರಣಗಳು ಜಾಸ್ತಿ ಇರ್ತಾವೆ. ಕುದರೆಯ ಆಪರೇಶನ್ ಸಕ್ಸೆಸ್ ಆಗಿದೆ ಅಂತಾರೆ ಪಶುವೈದ್ಯ ಡಾ.ಅನೀಲಕುಮಾರ ಪಾಟೀಲ್.
ಈ ಕುದುರೆಯ ಕಣ್ಣಿನ ಆಪರೇಶನ್ ನೋಡಲು ಸಾಕಷ್ಟು ಜನರು ಜಮಾಯಿಸಿದ್ದರು. ಕುದರೆ ಇದೀಗ ಆರೋಗ್ಯವಾಗಿದೆ. ಕುದರೆಗೆ 3 ಸ್ಟಿಚ್ ಹಾಕಿ ಸುಮಾರು 15 ದಿನಗಳ ಕಾಲ ಆರೈಕೆ ಮಾಡಲು ಹೇಳಿದ್ದಾರೆ. ಅಬ್ಬಾ ಬದುಕಿದೆ ಯಪ್ಪಾ ಬಡಜೀವ ಅಂತಾ ಕುದರೆ ವೈದ್ಯರಿಗೆ ತನ್ನದೇ ಶೈಲಿಯಲ್ಲಿ ಥ್ಯಾಂಕ್ಸ್ ಹೇಳಿ ಮನೆಕಡೆ ತೆರಳಿತು.