ಬೆಂಗಳೂರು, ಆ. 27: ಸಮಾರಂಭಕ್ಕೆಎಲ್ಲ ಸಿದ್ಧತೆಗಳೂ ಮಾಡಿಕೊಂಡಿರುವ ಬಿಜೆಪಿ, ಬಿಜೆಪಿ ಕಚೇರಿ ಎದುರಿನ ರಸ್ತೆಯಲ್ಲಿ ವೇದಿಕೆ ನಿರ್ಮಾಣ ಒಂದು ಸಾವಿರಕ್ಕೂ ಹಚ್ಚು ಆಸನಗಳ ವ್ಯವಸ್ಥೆಯಾಗಿದ್ದು, ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್. 10.30 ಕ್ಕೆ ಪದಗ್ರಹಣ ಸಮಾರಂಭ, ಆಂಭ ಅದಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಕಟೀಲ್ ಮತ್ತು ಸಿಎಂ ಪೂಜೆಮಾಡಿಸಿದರು. ಬಳಿಕ ಕಟೀಲ್ ಗೆ ಅಧಿಕಾರ ಹಸ್ತಾಂತರ ಮಾಡಲಿರುವ ಯಡಿಯೂರಪ್ಪನವರು. ಪದಗ್ರಹಣ ಸಮಾರಂಭ ಹಿನ್ನೆಲೆ ಜಗನ್ನಾಥ ಭವನದ ಎದುರಿನ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣ ಪದಗ್ರಹಣ ಕಾರ್ಯಕ್ರಮಕ್ಕೆ ಕೇಸರಿ ಉಡುಪಿನಲ್ಲಿ ಆಗಮಿಸಿರುವ ಕಟೀಲ್. ನಾನು ವಿದ್ವಾಂಸನಲ್ಲ, ಪಂಡಿತನಲ್ಲ ಸಂಘದ ಸಾಮಾನ್ಯ ಕಾರ್ಯಕರ್ತ ಸಂಘದ ಕಾರ್ಯಕರ್ತರು ನನಗೆ ಬೆಳೆಸಿದ್ದಾರೆ. ಆಡ್ತಾ ಆಡ್ತಾ ಬೆಳೆದೆ ಇವತ್ತು ಜವಾಬ್ದಾರಿ ಸ್ಥಾನ ಕೊಟ್ಟಿದ್ದಾರೆ ನನಗೆ ರಾಜ್ಯಾಧ್ಯಕ್ಷ ನಾಗಿರುವ ಸಂತಸ ಮತ್ತೊಂದಿಲ್ಲ ಎಚ್ಚರಿಕೆಯಿಂದ ಈ ಜವಾಬ್ದಾರಿ ನಿಭಾಯಿಸ್ತೇನೆ ಎಂದು ತಿಳಿಸಿದರು. ಭಯವೂ ಇದೆ, ಆತ್ಮವಿಶ್ವಾಸವೂ ಇದೆ ಯಡಿಯೂರಪ್ಪ ರಂಥ ನಾಯಕರ ಆಶಿರ್ವಾದ ನನ್ನ ಮೇಲಿದೆ ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ರಂಥವರ ಪರಿಶ್ರಮದಿಂದ ಪಕ್ಷ ಬೆಳೆದುಬಂದಿದೆ ಯಡಿಯೂರಪ್ಪ ಜಿಲ್ಲೆ ಜಿಲ್ಲೆಗೂ ಓಡಾಡಿ ಪ್ರವಾಹ ಸಂತ್ರಸ್ತರ ಕಷ್ಡ ಆಲಿಸ್ತಿದ್ದಾರೆ ಯಡಿಯೂರಪ್ಪ ಜೊತೆ ಪಕ್ಷ, ಕಾರ್ಯಕರ್ತರು ಇದ್ದಾರೆ ಯಡಿಯೂರಪ್ಪನವರ ಹೊಗಳಿದ ಕಟೀಲ್.