ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ

  • In Crime
  • November 22, 2019
  • 249 Views
ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ

ಗುಜರಾತ್,ನ.22: ತನಗೆ ಗಂಡು ಮಗುವಾಗಲಿಲ್ಲ ಎಂದು ಮನನೊಂದು ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತಿನ ಮಹಿಸಾಗರ್ ನಲ್ಲಿ ನಡೆದಿದೆ.
ಸಾವನ್ನಪ್ಪಿದ ಮಹಿಳೆ ಮಂಗು ದಾಮರ್ ಮತ್ತು ಅವರ ಮೂವರು ಹೆಣ್ಣು ಮಕ್ಕಳು ,ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಹಿರಿಯ ಮಗಳ ಜೊತೆ ಮಂಗು ಮನೆಯಿಂದ ಹೊರಟು ಮಧ್ಯರಾತ್ರಿ ಹೊತ್ತಲ್ಲಿ ಮನೆಗೆ ಬಂದು ನಿದ್ದೆ ಮಾಡಿದ್ದಳು. ಮಾರನೇ ದಿನ ಮೂವರು ಮಕ್ಕಳ ಜೊತೆ ದಾಮರ್ ಕೂಡ ಮನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಗಾಬರಿಗೊಂಡ ಕುಟುಂಬ ಹುಡುಕಾಟ ನಡೆಸಿತ್ತು. ಈ ವೇಳೆ ಗ್ರಾಮದ ಬಾವಿಯ ಹತ್ತಿರ ಸ್ವೆಟ್ಟರ್ ಹಾಗೂ ಬೆಡ್ ಶೀಟ್ ಕಂಡಿರುವುದಾಗಿ ದಾಮರ್ ಕುಟುಂಬಸ್ಥರುಗೆ ಮಾಹಿತಿ ನೀಡಿದ್ದಾರೆ, ಪತಿ ರಮನ್ ಬಾವಿಯ ಬಳಿ ಹೋದಾಗ ಮೂವರು ಹೆಣ್ಣು ಮಕ್ಕಳ ಮೃತದೇಹಗಳು ಬಾವಿಯಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ.

ನಂತರ ಕುಟುಂಬದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತನಿಖೆ ನಡೆಸಿದಾಗ ರಾಮನ್, ಮದುವೆಯಾಗಿ 7 ವರ್ಷವಾಗಿದೆ. ಮೂವರೂ ಹೆಣ್ಣು ಮಕ್ಕಳೇ ಇದ್ದು, ಗಂಡು ಮಗುವಾಗಿಲ್ಲ ಎಂದು ಮಂಗು ಬೇಸರಗೊಂಡಿದ್ದಳು ಇದರಿಂದ ವಿಚಲಿತಗೊಂಡ ದಾಮರ್ ಆತ್ಮಹತ್ಯ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos