ದೊಡ್ಡಬಳ್ಳಾಪುರ, ಅ.4: ಟೋಲ್ ಬಳಿ ಬಸ್ಸಿಗೆ ಕಾಯುತ್ತಿದ್ದ ಕಾಲೇಜ್ ಹುಡುಗಿಯ ಹಿಂದೆ ಬಿದ್ದ ಹುಚ್ಚ ವೆಂಕಟ್ ಲವ್ ಪ್ರಪೋಸ್ ಮಾಡಿ ಹುಚ್ಚಾಟ ಮೆರಿದಿದ್ದಾನೆ.
ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿಯ ಮಾರಸಂದ್ರ ಟೋಲ್ ಬಳಿ ಹುಚ್ಚ ವೆಂಕಟನ ಹುಚ್ಚಾಟಕ್ಕೆ ಸಾಕ್ಷಿಯಾಯಿತು. ಇಂದು ಬೆಳಿಗ್ಗೆ ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆ ಕಾರಿನಲ್ಲಿ ಹೊರಟ್ಟಿದ್ದ ಹುಚ್ಚ ವೆಂಕಟ್, ಮಾರಸಂದ್ರ ಟೋಲ್ ಬಳಿ ಕಾಲೇಜ್ ಹೋಗಲೆಂದು ಹುಡುಗಿಯೊಬ್ಬಳು
ಬಸ್ಸಿಗೆ ಕಾಯುತ್ತಿದ್ದಾಗ, ಟೋಲ್ ಬಳಿಯೇ ಕಾರು ನಿಲ್ಲಿಸಿ ಹುಡುಗಿಗೆ ಐ ಲವ್ ಯೂ ಎಂದು ಪ್ರಪೋಸ್ ಮಾಡಿದ್ದಾನೆ.
ಹುಚ್ಚ ವೆಂಕಟನ ಬಗ್ಗೆ ಮೊದಲೇ ತಿಳಿದಿದ್ದ ಹುಡು
ಗಿ ಮೊದಲಿಗೆ ಕಾಮಿಡಿ ಮಾಡ್ತಾ ಇದ್ದಾನೆ ಅಂದ್ಕೊಂಡ್ ಸುಮ್ಮನಾಗಿದ್ಳು. ಆದರೆ ಹುಚ್ಚ ವೆಂಕಟ್ ನನ್ನ ಮದುವೆಯಾಗೆಂದು ಹುಡುಗಿಗೆ ಕಾಡಲು ಶುರು ಮಾಡಿದ. ಇದರಿಂದ ಹುಡುಗಿ ಹೆದರಿ ಅಲ್ಲಿಂದ ಓಡಿಹೋಗಿದ್ದಾಳೆ. ಆಕೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಕಾಡಿದ. ಹುಡುಗಿ ಒಪ್ಪದಿದ್ದಾಗ ಕೋಪಗೊಂಡ ವೆಂಕಟ್ ತನ್ನ ಕಾರಿನ ಮುಂಭಾಗ ಗ್ಲಾಸಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಅಷ್ಟೋತ್ತಿಗೆ ಹುಚ್ಚ ವೆಂಕಟನ ಹುಚ್ಚಾಟ ನೋಡಲು ಜನ ಸಾಗರವೇ ಅಲ್ಲಿ ಸೇರಿತ್ತು.
ತನ್ನ ಪರ್ಸ್ ಕಳ್ಕೊಂಡಿದ್ದ ವೆಂಕಟಿನಿಗೆ ಜನರೇ ಹಣ ಕೊಟ್ಟರು. ಸ್ಥಳಕ್ಕೆ ಬಂದ ರಾಜನುಕುಂಟೆ ಪೊಲೀಸರು ಅಲ್ಲಿಂದ ಹುಚ್ಚ ವೆಂಕಟನನ್ನ ಕರ್ಕೊಂಡ್ ಹೋದರು.