ಬೆಂಗಳೂರು, ಡಿ. 16: ಮನುಷ್ಯನಿಗೆ ಕ್ಯಾನ್ಸರ್ ಸಕ್ಕರೆಕಾಯಿಲೆ ರಕ್ತದೊತ್ತಡ ಹೀಗೆ ಅನೇಕ ಕಾಯಿಲೆಗಳ ಜೊತೆಗೆ ಈ ಕೂದಲು ಉದುರುವುದು ಕೂಡ ಒಂದು ಎಲ್ಲದಕ್ಕಿಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾದರೆ ಈ ಕೂದಲು ಉದುರುವ ಸಮಸ್ಯೆಗೆ ಬೇರೆ ಚಿಕಿತ್ಸೆ ಪಡೆಯುವ ಬದಲು ನಾವೇ ನಮ್ಮ ಸುತ್ತ ಮುತ್ತ ಸಿಗುವಂತಹ ವನ ಮೂಲಿಕೆಯಿಂದ ಮನೆ ಮದ್ದನ್ನು ತಯಾರಿಸಿಕೊಂಡು ಅದರಿಂದ ಮುಕ್ತಿ ಹೊಂದಬಹುದು.
ಅತ್ಯಧಿಕ ಪೋಷಕಾಂಶ ಹೊಂದಿರುವ ಸೀಬೆ ಹಣ್ಣಿನ ಎಲೆಗಳು ಕೂದಲಿಗೆ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತವೆ ಕೂದಲು ಉದುರುವುದನ್ನು ನಿವಾರಿಸುವುದರ ಜೊತೆಗೆ ಕೂದಲು ಇನ್ನು ಹೆಚ್ಚಾಗಿ ಬೆಳೆಯಲು ಸಹಾಯ ಮಾಡುತ್ತದೆ ಇದಕ್ಕೆ ಕಾರಣ ಅವಶ್ಯಕವಾದ ಪೋಷಕಾಂಶಗಳು ಸಿಬೆ ಎಲೆಯಲ್ಲಿ ಇರುವುದಾಗಿದೆ
ಇದರಲ್ಲಿ ಮುಖ್ಯವಾಗಿ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೂದಲಿನ ಮೇಲೆ ಪ್ರಭಾವ ಬೀರುತ್ತದೆ ವಿಟಮಿನ್ ಬಿ5 ಬಿ6 ಬಿ3 ಚರ್ಮದಲ್ಲಿ ಟೀಶ್ಯೂಸ್ ಸುಧಾರಿಸಲು ಕಾರಣವಾಗುತ್ತದೆ. ವಿಟಮಿನ್ ಬಿ2 ಚರ್ಮದಲ್ಲಿ ಮೃತ ಕಣಗಳನ್ನು ನಿವಾರಿಸುವುದರ ಜೊತೆಗೆ ಸುಧಾರಿತ ಕಣಗಳ ಉತ್ಪತ್ತಿಗೆ ಕಾರಣವಾಗುತ್ತದೆ.
ನಿಮಗೆ ಬೇಕಾದಷ್ಟು ಸೀಬೆ ಎಲೆಗಳನ್ನು ತೊಳೆದು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬೇಕು ನಂತರ ಆ ನೀರು ತಣ್ಣಗಾದ ಮೇಲೆ ಆ ನೀರನ್ನು ತಲೆಯ ಮೇಲೆ ನಿಧಾನವಾಗಿ ಹಾಕುತ್ತ ಕೈಬೆರಳುಗಳಿಂದ ಆ ನೀರು ಕೂದಲಿನ ಬುಡಕ್ಕೆ ತಾಗುವಂತೆ ನಿಧಾನವಾಗಿ ಉಜ್ಜುತ್ತಿರಬೇಕು. ಹೀಗೆ ಮಾಡಿದ ಮೇಲೆ ಒಂದು ಗಂಟೆಯ ನಂತರ ತಲೆ ಸ್ನಾನ ಮಾಡಬೇಕು ನಿರಂತರವಾಗಿ 1 ತಿಂಗಳ ಕಾಲ ಹೀಗೆ ಮಾಡುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ನಿವಾರಣೆಯಾಗುತ್ತದೆ.