ಬಿಜೆಪಿ ಸರ್ಕಾರ ಇನ್ನೂ ಟೇಕಾಪ್ ಆಗಿಲ್ಲ

ಬಿಜೆಪಿ ಸರ್ಕಾರ ಇನ್ನೂ ಟೇಕಾಪ್ ಆಗಿಲ್ಲ

ದೇವನಹಳ್ಳಿ, ಅ. 29: ಇತ್ತೀಚಿಗೆ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಇನ್ನೂ ಟೇಕಾಪ್ ಆಗಿಲ್ಲ. ಅಭಿವೃದ್ಧಿಯ ಕಾರ್ಯಕ್ಕಾಗಿ ಬಿಡುಗಾಸು ನೀಡುತ್ತಿಲ್ಲ. ಹಲವು ಯೋಜನೆಗಳ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ಶಾಸಕ ಎಲ್ ಎನ್ ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ವಿಶ್ವನಾಥಪುರ ಗ್ರಾಪಂ ವತಿಯಿಂದ ನಡೆದ ಮೊದಲ ಹಂತದ ಗ್ರಾಮ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಆಗಬೇಕು. ಸರ್ಕಾರದಿಂದ ತಾಲೂಕಿಗೆ ಸುಮಾರು 150 ಕೋಟಿ ರೂಗಳ ಅನುದಾನ ವಿವಿಧ ಕಾಮಗಾರಿಗಳು ಸ್ಥಗಿತ ಗೊಂಡಿದೆ. ಕುಂದಾಣದಿಂದ ದೇವನಹಳ್ಳಿ ನಗರದ ಅಕ್ಕು ಪೇಟೆ ಹೊರಗಿನ ರಸ್ತೆಗೆ 02 ಹಂತದಲ್ಲಿ 6.05 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಟೆಂಡರ್ ಮುಗಿದಿದ್ದು ಕಾಮಗಾರಿಗೆ ಭೂಮಿ ಪೂಜೆ ನಡೆಸಬೇಕಿದೆ. ಪ್ರತಿ ಬುಧವಾರ ತಾಲೂಕು ಪಂಚಾಯಿತಿಯಲ್ಲಿ ಶಾಸಕರ ಕಚೇರಿಯಲ್ಲಿ ಜನರ ಕುಂದು ಕೊರತೆ ಸಭೆಯನ್ನು ನಡೆಸುತ್ತೇನೆ. ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಅನುದಾನವನ್ನು ತರಲಾಗುವುದು. ಬೆಸ್ಕಾಂ ಇಲಾಖೆಯ ನೀತಿಯೇ ಬಿನ್ನವಾಗಿದೆ. ಬೆಸ್ಕಾಂ ಸರ್ಕಾರದ ಒಂದು ಇಲಾಖೆಯನ್ನಾಗಿ ಸರ್ಕಾರ ಉಳಿಸಿಕೊಳ್ಳದ ಈ ಹಿಂದಿನ ಆಡಳಿತ ನಡೆಸಿದ ಜನ ಪ್ರತಿನಿಧಿಗಳ ತಪ್ಪು ನಿರ್ಧಾರದಿಂದ ಅವ್ಯವಸ್ಥೆ ಮಾರ್ಪಾಡಾಗಿದೆ ಎಂದು ಕಿಡಿ ಕಾರಿದರು.

ವಿಧ್ಯುತ್ ಕಡಿತ, ರೈತರಿಗೆ ಸಮರ್ಪಕವಾಗಿ ವಿಧ್ಯುತ್ ಪರಿವರ್ತಕ ನೀಡದೇ ಇರುವುದು. ಅವೈಜ್ಞಾನಿಕ ವಿಧ್ಯುತ್ ಕಂಬಗಳ ಮಾರ್ಗ, ಜೋತು ಬಿದ್ದಿರುವ ವಿಧ್ಯುತ್ ತಂತಿಗಳು, ರೈತರಿಗೆ ಸ್ಪಂಧಿಸದ ಮಾರ್ಗಾಧಿಕಾರಿಗಳು ಹಲವು ಸಮಸ್ಯೆಗಳ ಸರಮಾಲೆ ಬೆಸ್ಕಾಂ ಇಲಾಖೆ ಯಿಂದ ಆಗುತ್ತಿದೆ. ಕೂಡಲೇ ಇರುವ ಸಮಸ್ಯೆಗಳನ್ನು ಬಗೆ ಹರಿಸಬೇಕು. ಇಂಧನ ಸಚಿವರೊಂದಿಗೆ ಚರ್ಚಿಸಲಾಗುವುದು. ಗ್ರಾಮಗಳ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿದೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿಗೆ ಪೂರಕವಾಗಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಅನುಮೋದಿಸಲು ಆಯೋಜಿಸಿರುವ ಗ್ರಾಮ ಸಭೆಗಳಲ್ಲಿ ಜನರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ರೈತರು ಜಲ ಮೂಲಗಳ ರಕ್ಷಣೆಗೆ ಕೆರೆ ಕುಂಟೆಗಳನ್ನು ಸಂರಕ್ಷಿಸಿಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಬೇಕು. ಇಂಗು ಗುಂಡಿ ಮತ್ತು ಮಳೆ ಕೊಯ್ಲು ಪದ್ಧತಿಗಳನ್ನು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ನೀಡಬಹುದು. ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೀಕಾಯನ ಹಳ್ಳಿ ಒಂದು ಬೋರ್ ವೆಲ್ ಕೊರೆಸಲಾಗಿದೆ. ಚಿಕ್ಕ ಒಬದೇನ ಹಳ್ಳಿ ಗ್ರಾಮ

ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದರು.

ತಾಪಂ ಅಧ್ಯಕ್ಷೆ ಚೈತ್ರಾ ಮಾತನಾಡಿ. ತಾಲೂಕಿನಲ್ಲಿ ಬೆಸ್ಕಾಂ ಇಲಾಖೆಯಿಂದ ಹಲವಾರು ಸಮಸ್ಯೆಗಳು ಇವೆ. ಶಾಸಕರು ಇತ್ತ ಗಮನ ಹರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಇಷ್ಟಬಂದ ಜಾಗಗಳಲ್ಲಿ ಕಂಬಗಳನ್ನು ಹಾಕುತ್ತಿದ್ದಾರೆ ಎಂದು ಹೇಳಿದರು. ಈ ವೇಳೆಯಲ್ಲಿ ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ, ತಾಪಂ ಸದಸ್ಯೆ ಶೈಲಜಾ, ಗ್ರಾಪಂ ಉಪಾಧ್ಯಕ್ಷೆ ರಮಾದೇವಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಷಾ, ಹಾಗೂ ಗ್ರಾಪಂ ಸದಸ್ಯರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos