ಬೆಂಗಳೂರು, ಜ. 3 : ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಬೆಂಗಳೂರಿನ ರಾಜಕಾಲುವೆಗೆ ಇಳಿದು ಅವಾಂತರ ಸೃಷ್ಟಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಲಾಲ್ಬಾಗ್ ಬಳಿ ಇರುವ ರಾಜಕಾಲುವೆಯೊಳಗೆ ಹೋದ ಕುಡುಕನನ್ನು ಹೊರಗೆ ಕರೆತರಲು ಪೊಲೀಸರು ಪರದಾಟ ನಡೆಸಿದರೂ ಆತ ಕೈಗೆ ಸಿಕ್ಕಿಲ್ಲ.
ಗುರುವಾರ ರಾತ್ರಿ ಲಾಲ್ಬಾಗ್ ಬಳಿಯ ರಾಜಕಾಲುವೆಗೆ ಕುಡುಕನೋರ್ವ ಇಳಿದು ರಾದ್ಧಾಂತ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಆ ಜಾಗಕ್ಕೆ ಧಾವಿಸಿದ್ದರು. ಈ ವೇಳೆ ಆತನನ್ನು ಹೊರಗೆ ಕರೆತರಲು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸುತ್ತಲೂ ಸೇರಿದ್ದ ಜನರು ರಾಜಕಾಲುವೆಯಿಂದ ಮೇಲೆ ಹತ್ತುವಂತೆ ಕಿರುಚುತ್ತಿದ್ದರೂ ಕೇಳದ ಕುಡುಕ ರಾಜಕಾಲುವೆಯೊಳಗೆ ನಡೆದು ಹೋಗಿದ್ದಾನೆ.