ಕೊಂಗಾಡಿಯಪ್ಪ ನವರ ಪ್ರತಿಮೆಯನ್ನ ವಿರೂಪ

ಕೊಂಗಾಡಿಯಪ್ಪ ನವರ ಪ್ರತಿಮೆಯನ್ನ ವಿರೂಪ

ದೊಡ್ಡಬಳ್ಳಾಪುರ, ಸೆ. 30: ದೊಡ್ಡಬಳ್ಳಾಪುರ ನಗರದ ಲೋಕಸೇವಾನಿರತ ಬಿರುದಾಂಕಿತರಾದ ದಿವಂಗತ ಡಿ.ಕೊಂಗಾಡಿಯಪ್ಪ ನವರ ಪ್ರತಿಮೆಯನ್ನ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಶಾಸಕ ವೆಂಕಟರಮಣಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಶನಿವಾರ ರಾತ್ರಿ ದೊಡ್ಡಬಳ್ಳಾಪುರ ನಗರದ ಮಾರ್ಕೆಟ್ ಶಾಲೆ ಬಳಿ ಇರುವ ದಿವಂಗತ ಡಿ.ಕೊಂಗಾಡಿಯಪ್ಪ ನವರ ಪ್ರತಿಮೆಯನ್ನ ಕೆಲ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ.

ಇದನ್ನ ದೇವಾಂಗ ಮಂಡಲಿಯ ಮುಖಂಡರು ತೀವವಾಗಿ ಖಂಡಿಸಿದ್ದು, ನೆನ್ನೆ ಪ್ರತಿಮೆ ಬಳಿಯೇ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈಬಗ್ಗೆ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿತ್ತು.

ಇನ್ನು ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿ ದೇವಾಂಗ ಸಮುದಾಯದ ಮುಖಂಡರು, ನಗರಸಭೆ ಅಧಿಕಾರಿಗಳು, ಪೊಲೀಸರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ, ಲೋಕಸೇವಾನಿರತ ಎಂದೇ ಬಿರುದಾಂಕಿತರಾದ ಕೊಂಗಾಡಿಯಪ್ಪನವರ ಪ್ರತಿಮೆ ಭಗ್ನಗೊಳಿಸಿರುವುದು ಖಂಡನೀಯ. ಅವರು ಸ್ಥಾಪಿಸಿದ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಜನ ವಿದ್ಯಾರ್ಥಿಗಳು ಇಂದು ದೇಶವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಇದ್ದಾರೆ. ತಾಲೂಕಿಗೆ ಅವರು ನೀಡಿದ ಕೊಡುಗೆಗಳು ಅಪಾರ. ಅಂಥಹ ಮಹಾನ್ ವ್ಯಕ್ತಿ ಪ್ರತಿಮೆ ವಿರೂಪಗೊಳಿಸುವುದು ನಿಜಕ್ಕೂ ತಲೆ ತಗ್ಗಿಸುವಂಥಾದ್ದು. ಆರೋಪಿಗಳು ಯಾರೇ ಅಗಿರಲಿ ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos