ತಿಪಟೂರು, ಜ. 26: ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿ ಅನೇಕ ಮಹಾನೀಯರು ತಮ್ಮ ಜೀವಗಳನ್ನೇ ಮುಡಿಪಾಗಿಟ್ಟು ಹೋರಾಟ ಮಾಡಿದ ಧೀಮಂತ ಹೋರಾಟಗಾರರಿಂದ ಇಂದು ನಾವು ಭಾರತದಲ್ಲಿ ಭವ್ಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಕುಮಾರಿ ನಂದಿನಿ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ 71 ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಇಂದು ಇಂತಹ ಗಣರಾಜ್ಯೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಹಾಗೂ ತಮಗೆ ತಮ್ಮ ಬಾಲ್ಯದ ನೆನಪುಗಳು ಸಹ ಮರುಕಳಿಸುವಂತೆ ಮಾಡುತ್ತಿವೆ ಎಂದು ಹೆಮ್ಮೆಯಿಂದ ತಿಳಿಸಿದ ಅವರು, ದೇಶದ ಸ್ವಾತಂತ್ರ್ಯಕ್ಕೋಸ್ಕರ ಡಾ ಅಂಬೇಡ್ಕರ್ ಅವರು ತಮ್ಮದೇ ಆದ ಒಂದು ಸಂವಿಧಾನವನ್ನು ರಚಿಸಿ ದೇಶಕ್ಕೆ ಉಡುಗೊರೆಯಾಗಿ ನೀಡಿದ್ದ ಇಂತಹ ಮಹಾನ್ ದಿವಸವನ್ನು ಇಂದು ನಾವು ಹಬ್ಬವಾಗಿ ಆಚರಣೆ ಮಾಡುತ್ತಿರುವುದು ನಾಡಿನ ಜನತೆಗೆ ಶೋಭೆ ತರುವಂತಹದ್ದು ಎಂದು ತಿಳಿಸಿದರು.
ಶಾಸಕ ಬಿ ಸಿ ನಾಗೇಶ್ ಮಾತನಾಡಿ, ಅಮೆರಿಕ ಹಾಗೂ ಭಾರತದಂಥ ಬೃಹತ್ ರಾಷ್ಟ್ರಗಳಲ್ಲಿ ಲಿಖಿತ ಸಂವಿಧಾನವನ್ನು ಹೊಂದಿರುವಂತಹ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರೆದುಕೊಟ್ಟ ಸಂವಿಧಾನವನ್ನು ಇಂದು ಚಾಚೂ ತಪ್ಪದೆ ಪಾಲಿಸುತ್ತಿರುವ ಪ್ರತಿಯೊಬ್ಬ ಭಾರತೀಯರಿಗೂ ಇಂದಿನ ದಿವಸ ಹೆಮ್ಮೆಯ ದಿನವಾಗಿದೆ. ಈ ಹಿಂದೆ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವಿನಿಂದ ಇಂದು ಆರ್ಟಿಕಲ್ ತ್ರಿ ಸೆವೆಂಟಿ ಯನ್ನು ರದ್ದುಗೊಳಿಸಿರುವುದು ಈ ಸಂದರ್ಭದಲ್ಲಿ ನಡೆಯುವಂಥದ್ದು ಅದರ ಜೊತೆಯಲ್ಲೇ ಎನ್ಆರ್ಸಿ ಹಾಗೂ ಸಿಎಎ ಜಾರಿಗೊಳಿಸಲು ಮುಂದಾಗಿರುವುದು ದೇಶದ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಿಂದ ಅವರು ದೇಶ ಸುಭಿಕ್ಷವಾಗಿ ಇರಲು ಇಲ್ಲಿನ ರೈತರು ಹಾಗೂ ಸೈನಿಕರಿಂದ ಮಾತ್ರ ಸಾಧ್ಯ ಎಂದು ಹೆಮ್ಮೆ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ತಾಲ್ಲೂಕಿನ ಆಡಳಿತ ವರ್ಗ ಶಿಕ್ಷಣ ಇಲಾಖೆ ತಾಲೂಕು ಪಂಚಾಯತ ಪದಾಧಿಕಾರಿಗಳು ನಗರಸಭೆ ಸದಸ್ಯರುಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.