ಕಾಟನ್‌ಪೇಟೆ, ಆ. 23: ಅತ್ಯಂತ ಪ್ರಮುಖ ಸಂಪರ್ಕ ಕಲ್ಪಿಸುವ ಜನನಿಬಿಡ ರಸ್ತೆಯಾಗಿರುವ ಕಾಟನ್‌ಪೇಟೆ ರಸ್ತೆಯಲ್ಲಿ ವಾಹನಗಳ ಸಂಚರಕ್ಕೆ ಮುಕ್ತವಾಗಲು ಕನಿಷ್ಟ ಏಳೆಂಟು ತಿಂಗಳುಗಳೇ ಬೇಕು. ಹಾಲಿ ನಡೆಯುತ್ತರುವ ವೇಗದಲ್ಲೇ ಕಾಮಗಾರಿ ನಡೆದರೆ ವರ್ಷ ಕಳೆದರೂ ಅಚ್ಚರಿಯಿಲ್ಲ. ಕಾಟನ್‌ಪೇಟೆ ಮುಖ್ಯರಸ್ತೆಯ ಟೆಂಡರ್ ಶ್ಯೂರ್ ಪ್ರಕ್ರಿಯೆ ಅವದಿ ಮುಗಿದು ಹೋಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ವಾನಗಳ ಪರದಾಟ, ದಿನಿತ್ಯದ ಚಟುವಟಿಕೆಗಳಿಗೆ ತೊಡಕಾಗಿದೆ.
ಪ್ರಮುಖ ವಾಣಿಜ್ಯ ಕೇಂದ್ರವಾಗಿರವ ರಸ್ತೆಯಲ್ಲಿನ ವ್ಯಾಪಾರಿಗಳು ಮತ್ತಷ್ಟು ನಷ್ಟ ಅನುಬವಿಸುವ ಆತಂಕದಲ್ಲಿದ್ದಾರೆ. ರಸ್ತೆ ಕಾಮಗಾರಿ ಮುಂದಿನ ತಿಂಗಳು ಮುಗಿಯುವ ಹಂತ ತಲಿಪಿದೆ ಎಂಬ ಆಶಾಭಾವನೆಯಲ್ಲಿದ್ದವರಿಗೆ ಮತ್ತೆ ನಿರಾಸೆ ಎದುರಾಗಿದೆ. 2019ರ ಸೆಪ್ಟಂಬರ್ ಅಂತ್ಯದ ವೇಳೆಗೆ ಕಾಮಗರಿ ಪೂರ್ಣಗೊಳಿಸುವಂತೆ ಅಂತಿಮ ಗಡುವು ನೀಡಲಾಗಿತ್ತು. ಬಿಬಿಎಂಪಿ ಮತ್ತು ಜಲಮಂಡಳಿಯ ಸಮನ್ವದ ಕೊರತೆ, ಕಾಮಗಾರಿಯಲ್ಲಿನ ತಾಂತ್ರಿಕ ತೊಂದರೆ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಏಳೆಂಟು ತಿಂಗಳ ಕಾಲ ಮುಂದಕ್ಕೆ ಹೋಗುವ ಸಾದ್ಯತೆಗಳೆ ಹೆಚ್ಚು.
ಆರೇಳುತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳು ನೀಡಿದ್ದ ಭರವಸೆ ಹುಸಿಯಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇಲ್ಲದ ಕಾರನ ವ್ಯಪಾರಿಗಳಲ್ಲಿನ ಆತಂಕಕ್ಕೆ ಕಾರಣ. 1.13 ಕಿ.ಮೀ ಉದ್ದದ ರಸ್ತೆಯಲ್ಲಿ ಎಲ್ಲಿ ನೋಡಿದರೂ ಮಣ್ಣಿನ ರಾಶಿ ಬೆಟ್ಟದಂತೆ ಕಾಣುತ್ತಿದೆ. ಶೇಕಡ 35 ರಷ್ಟು ಮಾತ್ರ ಕಾಮಗಾರಿ ಮುಗಿದಿದೆ.
ಮಳೆನೀರುಗಾಲುವೆ
ಮತ್ತೊಂದೆಡೆ ಮಳೆ ನೀರು ಕಾಲುವೆ ನಿರ್ಮಣ ಮಾಡಲಾಗುತ್ತಿದೆ. ಜಲಮಂಡಳಿಯಿಂದ ಒಳಚರಂಡಿ ನಿರ್ಮಿಸುವ ಕಮಗಾರಿ ಕೆಲಸವೂ ನಡೆಯುತ್ತಿದೆ. ಇವುಗಳಕಾಮಗಾರಿ ಕೆಲಸ ನಿದಾನವಾದ ಹಿನ್ನೆಲೆ ಮುಖ್ಯ ರಸ್ತೆಯ ಕಾಮಗಾರಿ ಕೆಲಸ ಸಂರ್ಪೂ ಹಿನ್ನಡೆಯಾಗಲು ಕಾರಣವಾಗಿದೆ. ಮಳೆ ನೀರು ಸಂಗ್ರಹ ಕಾಮಗರಿ ಹೆಚ್ಚು ಸಮಯ ತೆಗೆದುಕೊಂಡ ಕಾರಣ ಕಾಮಗರಿ ಆರಂಭಿಸಲು ತಡವಾಗಿದೆ ಎನ್ನುವುದು ಅಧಿಕಾರಿಗಳಿಂದ ಬರುವ ಉತ್ತರ.300 ಮೀಟರ್ ಉದ್ದದ ಸಮಾರು ಹತ್ತ ಮಿಟರ್ ಆಳದ ನೀರುಗಾಲುವೆಗೆ ಮೆಲ್ಬಾಗದ ಚವಣಿ ಅಳವಡಿಸುವ ಕೆಲಸ ಮುಗಿದ ಮೇಲೆ, ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಕಷ್ಟದಲ್ಲಿ ವ್ಯಾಪಾರಿಗಳು
ರಸ್ತೆಯ ಎರದೂ ಬದಿಯಲ್ಲಿ ಹಲವಾರು ಲಾಡ್ಜ್ಗಳು, ಹೋಟೆಲ್ ಮತ್ತು ಕ್ಯಾಂಟೀನ್‌ಗಳು, ಮೆಡಿಕಲ್ ಆಪ್ ಗಳು, ರಸ್ತೆ ಬದಿ ವ್ಯಾಪರಿಗಳ ಬಹುತೇಕ ವ್ಯಾಪರ ನಷ್ಟಕೊಳಗಗಿ, ಅಂಗಡಿಗಳನ್ನು ಮುಚ್ಚುವ ಹಂತಕ್ಕೆ ತಲುಪಿದ್ದಾರೆ. ನಲವತ್ತು ವರ್ಷಗಳಿಂದ ಅಂಗಡಿ ಇಟ್ಟುಕೊಂಡಿದ್ದು, ಮೊದಲ ಭಾರಿಗೆ ದೊಡ್ಡಮಟ್ಟದ ನಷ್ಟ ಅನುಭವಿದ್ದೇನೆ. ಪ್ರತಿದಿನ ಪ್ರವಾಸಿಗಳು, ಈ ರಸ್ತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದ ಜನರು ಬಹುತೇಕ ಇತ್ತ ಸುಳಿಯದ ಕಾರಣ ದಿನಸಿ ವ್ಯಾಪಾರವೂ ನಡೆಯುತ್ತಿಲ್ಲ. ಆರು ತಿಂಗಳಲ್ಲಿ ಕೆಲಸ ಮುಗಿಸಿ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಈಗಿನ ಪರಸ್ಥಿತಿ ನೋಡಿದರೆ ಕಾಮಗಾರಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ದಿನಸಿ ವ್ಯಾಪಾರಿ ಬಾಬು ಅಸಮದನ ವ್ಯಕ್ತಪಡಿಸಿದರು.
ಟಿಸಿಎಂ ರಸ್ತೆ ಈವರೆಗೆ ಏಕಮುಖ ಸಂಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಸ್ಥಳಿಯರು ಮತ್ತು ಹೊರಗಿನಿಂದ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಆರಂಭದ ಸ್ವಲ್ಪ ದೂರ ಸಂಪರ್ಕ ರಸ್ತಗಳಿಗೆ ಸೇರುವವರೆಗೂ ದ್ವಿಪತ ಸಂಚಾರಕ್ಕೆ ಅವಕಾಶ ಕಲ್ಪಸಲಾಗಿದೆ. ಇದನ್ನೆ ನೆಪ ಮಾಡಿಕೊಂಡಿರುವ ದ್ವಿಚಕ್ರವಾಹನ ಸವಾರರು ಫುಟ್ ಪಾತ್ ಮೇಲು ವಾಹನ ಓಡಿಸುವುದರಿಂದ ಪಾದಚಾರಿಗಳಿಗೆ ತೊಂದರೆ ಆಗುತ್ತಿರು ನಿವಾರಣೆ ಮಾಡಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ.
ಮಕ್ಕಳನ್ನು ಶಾಲೆಯ ವಾಹನಗಳಿಗೆ ಬಿಡಲು ಹಾಗೂ ವಪಸ್ ಬರಲು ಕಿಲೋ ಮೀಟರ್ ನಸಷ್ಟು ದೂರ ನಡೆಯಬೇಕದ ಪರಿಸ್ಥತಿ ನಿರ್ಮಾಣವಾಗಿದೆ. ಕಾಟನ್ ಪೇಟೆಯ ಠರಂಭದ ಜಂಕ್ಷನ್‌ಗೆ ಹೋಗಿ ಬರುವುದೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯ ನಿವಾಸಿ ಶ್ರೀಮತಿ ಶೈಲಜಾ ಉದಯಕುಮಾರ್ ಹೇಳಿದ್ದಾರೆ.
ಮಳೆ ಬಂದರಂತೂ ರಸ್ತೆಯಲ್ಲಿ ಓಡಾಡಲು ಸಾದ್ಯವಿಲ್ಲ
ಮಳೆ ಬಂದರಂತೂ ರಸ್ತೆಯಲ್ಲಿ ಓಡಾಡಲು ಸಾದ್ಯವಿಲ್ಲ, ಎಲ್ಲಿಗೆ ಹೋಗಬೇಕೆಂದರೂ ಕಾಟನ್ ಪೇಟೆ ಜಂಕ್ಷನ್ ರಸ್ತೆ ದಾಟಿ ಹೋಗಿ ಆಟೋ, ಬಸ್ ಇನ್ನಿತರ ವಾಹನಗಳಿಗೆ ಆಶ್ರಯ ಆಗಿರುವುದೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎಂದು ಸ್ಥಳಿಯ ಖಾಸಗಿ ಉದೋಗಿ ಸುಷ್ಮ ಹೇಳಿದ್ದಾರೆ.
ರಸ್ತೆ ಕಮಗಾರಿ ಅಭಿವೃದ್ದಿಗೆ ನಮ್ಮ ತಕರಾರಿಲ್ಲ ಮುಂದಿ ದಿನಗಳಲ್ಲಿ ಸುಸಜ್ಜಿತ ಸಿಮೆಂಟ್ರಸ್ತೆಯಲ್ಲಿ ಓಡಾಡುವ ಅವಕಾಶ ಸಿಗಲಿದೆ. ಆದರೆ ಆದಷ್ಟು ಬೆಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆ ಮಾಡಿ ವ್ಯಾಪಾಇಗಳ ಹಿತ ಕಾಯಲಿ ಎಂದು ಮುತ್ತುರಾಜ್ ಒತ್ತಾಯಿಸಿದರು.