ಕಂಕಣ ಸೂರ್ಯಗ್ರಹಣಕ್ಕೆ ದೇಗುಲಗಳು ಬಂದ್

ಕಂಕಣ ಸೂರ್ಯಗ್ರಹಣಕ್ಕೆ ದೇಗುಲಗಳು ಬಂದ್

ಬೆಂಗಳೂರು, ಡಿ. 26: ಕಂಕಣ ಸೂರ್ಯಗ್ರಹಣ  ಆರಂಭವಾಗಿದ್ದು, ಗ್ರಹಣ ಕಾಲದಲ್ಲಿ ತಿರುಮಲ ತಿರುಪತಿ ದೇವಸ್ಥಾನ, ಧರ್ಮಸ್ಥಳ ಸೇರಿದಂತೆ ಪುಣ್ಯಕ್ಷೇತ್ರಗಳಲ್ಲಿ ಗ್ರಹಣ ಕಾಲದಲ್ಲಿ ಬೆಳಗ್ಗಿನಿಂದಲೇ ದರ್ಶನವನ್ನು ಸ್ಥಗಿತಗೊಳಿಸಿದೆ.

ಗ್ರಹಣದ ಅವಧಿಯಲ್ಲಿ ದೇವರಿಗೆ ಗ್ರಹಣ ದೋಷ ನಿವಾರಣೆಗೆ ಜಲಾಭಿಷೇಕ ನಡೆದರೆ  ಗ್ರಹಣದ ಬಳಿಕ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

ಇನ್ನು, ಒಂದೆಡೆ ಗ್ರಹಣ ಕಾಲದಲ್ಲಿ ದೇವರ ಪೂಜೆ ಮತ್ತು ದರ್ಶನಕ್ಕೆ ಭಕ್ತರಿಗೆ ಬಹುತೇಕ ದೇಗುಲಗಳು ನಿರ್ಬಂಧ ವಿಧಿಸಿದರೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹಾಕಾಳಿ ದೇವಾಲಯದ ಸ್ವಾಮೀಜಿಯೊಬ್ಬರು ಗ್ರಹಣಕ್ಕೆ ಸೆಡ್ಡು ಹೊಡೆದು ಗ್ರಹಣ ಕಾಲದಲ್ಲಿಯೇ ದೇವರ ಪೂಜೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ದೇಗುಲಕ್ಕೆ ಬರುವ ಭಕ್ತರಿಗೆ ಗ್ರಹಣದ ಬಗೆಗಿನ ಮೂಡ ನಂಬಿಕೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗ್ರಹಣ ಒಂದು ಪ್ರಕೃತಿಯಲ್ಲಿ ಜರುಗುವ ವಿಸ್ಮಯವಷ್ಟೆ. ಇದರಿಂದ ಯಾವುದೇ ಕೆಡುಕಾಗುವುದಿಲ್ಲ ಎಂದು  ಭಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತಾವು ಗ್ರಹಣ ವೇಳೆಯಲ್ಲಿ ದೇವಿ ಪೂಜೆ ಮಾಡಲಿದ್ದು, ಪೂಜೆಯಲ್ಲಿ ಭಾಗವಹಿಸಿ ಎಂದು ದೇವಾಲಯದ ಸ್ವಾಮೀಜಿ ಗುರುದೇವ್ ಭಕ್ತರಿಗೆ ಕರೆ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos