ಬೆಂಗಳೂರು: ಬೊಮ್ಮನಹಳ್ಳಿ, ಫಿರಂಗಿಪಾಲ್ಯದಲ್ಲಿ ಅಂಬೇಡ್ಕರ್ ಭವನ ಲೋಕಾರ್ಪಣೆ ಮಾಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತೇಜಸ್ವಿ ಸೂರ್ಯ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುವ ದೂರ ದೃಷ್ಟಿ ಹೊಂದಿದೆ. ಸಮಗ್ರ ಅಭಿವೃದ್ಧಿ, ಹಲವು ಯೋಜನೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ, ಭವಿಷ್ಯದಲ್ಲಿ ದೇಶವನ್ನು ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸುವುದಾಗಿ ಮೋದಿ ಕನಸಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಎಂದಿಗೂ ಅವರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ, ಭಾರತ ರತ್ನ ಪ್ರಶಸ್ತಿಯನ್ನು ನೆಹರು ಕುಟುಂಬವು ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದು, ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಬೇಕೆಂಬ ಇಚ್ಛೆಯು ಕಾಂಗ್ರೆಸ್ಗೆ ಇರಲಿಲ್ಲ, ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಬಂದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಾಯಿತು ಮಾತ್ರವಲ್ಲ ಅಂಬೇಡ್ಕರ್ ಇಂದ ಮನೆಯ ಜಾಗವನ್ನು ಮ್ಯೂಸಿಯಂ ಮಾಡಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದರು
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಎಚ್ಡಿಕೆ ಹೇಳಿಕೆ ಸಮರ್ಥನೆ ಎಚ್ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಗೊಂದಲ ಇದೆ. ಕುಮಾರಸ್ವಾಮಿರವರು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿ ಹೇಳಿಕೆ ನೀಡಿಲ್ಲ, ಗ್ರಾಮೀಣ ಭಾಗದ ಹಳ್ಳಿಗಾಡಿನ ಹೆಣ್ಣುಮಕ್ಕಳನ್ನು ದಡ್ಡರು ಎಂದು ಭಾವಿಸಿದ್ದಾರೆ.
ಸ್ವಂತವಾಗಿ ಯೋಜನೆ ಮಾಡುವ ಶಕ್ತಿಯಿಲ್ಲ ಅಂದುಕೊಂಡಿದ್ದು ಅದನ್ನು ದುರುಪಯೋಗಪಡಿಸುಕೊಳ್ಳಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ ಎಂದು ಎಚ್ಡಿಕೆ ಹೇಳಿರೋದು ಅದನ್ನು ಕಾಂಗ್ರೆಸ್ನವರು ತಿರುಚಿ ವಿವಾದ ಮಾಡಲು ಹೊರಟಿದ್ದಾರೆ. ಗ್ರಾಮೀಣ ಹೆಣ್ಣುಮಕ್ಕಳ ಬುದ್ದಿವಂತಿಕೆಯನ್ನು ಪ್ರಶ್ನೆ ಮಾಡಿ ಗ್ಯಾರಂಟಿ ಕೊಟ್ಟು ಯಾಮಾರಿಸಬಹುದು ಎಂದುಕೊಂಡಿರುವ ಕಾಂಗ್ರೆಸ್ಗೆ ಕರ್ನಾಟಕ ರಾಜ್ಯದ ಮಹಿಳೆಯರು ಎಪ್ರಿಲ್ 26 ಕ್ಕೆ ಕಾಂಗ್ರೆಸ್ನ ಮನೆಗೆ ಕಳುಹಿಸುತ್ತಾರೆ ಎಂದು ಕಿಡಿಕಾರಿದರು.