ಕೇಂದ್ರದ ವೈಫಲ್ಯಗಳನ್ನು ಪ್ರಶ್ನಿಸಲು ‘ಟೀಮ್ ಇಂಡಿಯಾ’

ಕೇಂದ್ರದ ವೈಫಲ್ಯಗಳನ್ನು ಪ್ರಶ್ನಿಸಲು ‘ಟೀಮ್ ಇಂಡಿಯಾ’

ಬೆಂಗಳೂರು: ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಲು ‘ಟೀಮ್ ಇಂಡಿಯಾ’ ಪರಿಕಲ್ಪನೆ ರೂಪಿಸಲಾಗಿದೆ. ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಮೋದಿ ಮತ್ತು ಅವರ ಪರಿವಾರಕ್ಕೆ ನೆನಪಿಸಬೇಕಿದೆ. ಉದ್ಯೋಗ, ಕಪ್ಪು ಹಣ, ತರುವ ಭರವಸೆ, ಸೆಚ್ಚಿದ ಶ್ರೀಮಂತರ ಸಂಪತ್ತು, ಅಭದ್ರತೆಗೆ ತಳ್ಳಲ್ಪಟ್ಟ ಕಾರ್ಮಿಕ, ರೈತ, ಯುವಜನರ ಸಂಕಟಗಳಿಗೆ ಕಾರಣವಾದ ಅವರ ಆಡಳಿತ ನೀತಿಯನ್ನು ಸೋಲಿಸಬೇಕಾಗಿದೆ ಎಂಬುದು ಟೀಮ್ ಇಂಡಿಯಾ ಗುರಿಯಾಗಿದೆ.

ಮತ್ತೊಮ್ಮೆ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಅದು ಭಾರತದ ಭವಿಷ್ಯವನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಪ್ರಜಾಪ್ರಭುತ್ವ, ಸಂವಿಧಾನ ಅಪಾಯಕ್ಕೆ ಸಿಲುಕಲಿದೆ. ಮತ್ತೊಂದು ಮಹಾ ಚುನಾವಣೆಗೆ ಸಿದ್ದತೆ ನಡೆಯುತ್ತಿದೆ. ದುಡಿಯುವ ಕೈಗೆ ಉದ್ಯೋಗ, ನಿರುದ್ಯೋಗ ನಿವಾರಣೆ, ಕಪ್ಪು ಹಣದ ವಾಪಾಸಾತಿ, ಭ್ರಷ್ಟಾಚಾರ ನಿರ್ಮೂಲನೆ, ಸ್ವಾವಲಂಬನೆ ಮುಂತಾದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಮೈತ್ರಿಕೂಟದ ಸರಕಾರ ಎಲ್ಲಾ ರಂಗಗಳಲ್ಲಿ‌ ದಯನೀಯ ವೈಫಲ್ಯ ಕಂಡಿದೆ. ವಿವೇಚನಾ ರಹಿತವಾದ ನೋಟ್ ಬ್ಯಾನ್ ನಂತಹ ನಿರ್ಧಾರಗಳು, ಕಾರ್ಪೊರೇಟ್ ಶ್ರೀಮಂತರ ಪರವಾದ ನೀತಿಗಳು ದೇಶದಲ್ಲಿ ಹಸಿವಿನ ಸಮಸ್ಯೆಯನ್ನು ಹೆಚ್ಚಿಸಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನಿರ್ಮಾಣ, ಕಪ್ಪು ಹಣ ವಾಪಾಸತಿಯಂತಹ ಭರವಸೆಗಳು ಪೂರ್ಣಪ್ರಮಾಣದಲ್ಲಿ ಸುಳ್ಳಾಗಿವೆ. ಬದಲಿಗೆ ನಿರುದ್ಯೋಗ, ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ ಎಂದು ಟೀಮ್ ಇಂಡಿಯಾ ಅಭಿಪ್ರಾಯ ಪಟ್ಟಿದೆ

ಈ ಎಲ್ಲಾ ಮಾತು ತಪ್ಪಿದ ಆಡಳಿತದಿಂದ ಜನಸಾಮಾನ್ಯರು ಬದುಕುವ ದಾರಿ ಕಾಣದೆ ಪರಿತಪಿಸುತ್ತಿದ್ದಾರೆ. ಜನತೆಯ ಈ ಅತೃಪ್ತಿಯಿಂದ ಅವರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಮತ್ತದರ ಪರಿವಾರ ಜನತೆಯ ನಡುವೆ ಭಾವನಾತ್ಮಕ, ವಿಭಜನಕಾರಿ ವಿಷಯಗಳನ್ನು ಬಿತ್ತಿ ದೇಶದಲ್ಲಿ ಆತಂಕದ ವಾತಾವರಣ ಮೂಡಿಸುತ್ತಿದೆ.‌ ಧರ್ಮಗಳ ನಡುವೆ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ, ಆ ಮೂಲಕ ನಿರ್ಮಾಣವಾಗುವ ಉನ್ಮಾದದ ಮರೆಯಲ್ಲಿ ಮತ್ತೊಮ್ಮೆ ಗೆದ್ದು ಬರಲು ಗಂಭೀರ ಪ್ರಯತ್ನ ನಡೆಸುತ್ತಿದೆ. 
ಬಿಜೆಪಿ ಮತ್ತದರ ಪರಿವಾರದ ಈ ನಕಾರಾತ್ಮಕ ರಾಜಕಾರಣ ಯಶಸ್ಸು ಸಾಧಿಸಿದರೆ ದೇಶ ಬಹುದೊಡ್ಡ ಅಪಾಯಕ್ಕೆ ತಲೆಕೊಡಬೇಕಾಗುತ್ತದೆ ಎಂದು ಟೀಮ್ ಇಂಡಿಯಾ ಆತಂಕ ವ್ಯಕ್ರಪಡಿಸಿದೆ.

ಭಾರತದ ಬಹುತ್ವ, ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆಯ ಮೇಲೆ ಯಾವ ನಂಬಿಕೆಯನ್ನೂ ಹೊಂದದ ಈ ಶಕ್ತಿಗಳು ಮತ್ತೊಮ್ಮೆ ಗೆದ್ದು ಬಂದರೆ ಅಪಾರ ತ್ಯಾಗ ಬಲಿದಾನದಿಂದ ಕಟ್ಟಲ್ಪಟ್ಟಿರುವ ನಮ್ಮ ದೇಶದ ವ್ಯವಸ್ಥೆ ದೊಡ್ಡ ಪ್ರಹಾರಕ್ಕೆ ಒಳಗಾಗುತ್ತದೆ. ಪ್ರಜಾಪ್ರಭುತ್ವದ ಮೇಲೆ ಕಿಂಚಿತ್ ನಂಬಿಕೆಯನ್ನೂ ಹೊಂದದ ಮೋದಿ ಪರಿವಾರದ ಆಡಳಿತದಲ್ಲಿ ಲಾಭ ಪಡೆದದ್ದು ಅಂಬಾನಿ, ಅದಾನಿ, ಮಿತ್ತಲ್ ನಂತಹ ದೊಡ್ಡ ಶ್ರೀಮಂತರು ಮಾತ್ರ. ಅಂತಹವರ ಪರವಾಗಿಯೆ ಆಡಳಿತ ನಡೆಸಲಾಯಿತು ಎಂದು ಟೀಮ್ ಇಂಡಿಯಾ ದೂರಿದೆ.

ಈಗ ಮತ್ತೊಮ್ಮೆ ಚುನಾವಣೆ ಎದುರಾಗಿದೆ. ಈ ಬಾರಿ ಜನತೆ ಎಚ್ಚರ ತಪ್ಪಬಾರದು. ಕಳೆದ ಚುನಾವಣೆಯಲ್ಲಿ‌ ನೀಡಿದ ಭರವಸೆಯನ್ನು ಮೋದಿ ಪರಿವಾರಕ್ಕೆ ನೆನಪಿಸಬೇಕಿದೆ. ಎಲ್ಲಿದೆ ಉದ್ಯೋಗ ? ಎಲ್ಲಿದೆ ಕಪ್ಪು ಹಣ ? ಎಂದು ಕೇಳಬೇಕಿದೆ. ಹೆಚ್ಚಿದ ಶ್ರೀಮಂತರ ಸಂಪತ್ತು, ಅಭದ್ರತೆಯ ಬದುಕಿಗೆ ತಳ್ಳಲ್ಪಟ್ಟ ಕಾರ್ಮಿಕರ, ರೈತರ, ಯುವಜನರ ಸಂಕಟಗಳಿಗೆ ಕಾರಣವಾದ ಅವರ ಆಡಳಿತ ನೀತಿಯನ್ನು ಸೋಲಿಸಬೇಕಾಗಿದೆ. ಮತ್ತೊಮ್ಮೆ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಅದು ಭಾರತದ ಭವಿಷ್ಯವನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಪ್ರಜಾಪ್ರಭುತ್ವ, ಸಂವಿಧಾನ ಅಪಾಯಕ್ಕೆ ಸಿಲುಕಲಿದೆ ಎಂದು ಟೀಮ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.

ಆ ನಿಟ್ಟಿನಲ್ಲಿ ಜನತೆಯನ್ನು ಎಚ್ಚರಿಸಲು, ಚುನಾವಣೆಯ ಸಂದರ್ಭದಲ್ಲಿ ಜಾಗೃತಿ ಮೂಡಿಸಲು, ಯುವಜನತೆಯ, ರೈತರ, ಕಾರ್ಮಿಕರ, ಮಹಿಳೆಯರ ಬೇಡಿಕೆಗಳನ್ನು ಮುಖ್ಯ ವಿಷಯವಾಗಿಸಲು ದೇಶದ ಭವಿಷ್ಯದ ಕುರಿತು ಖಾಕಾಳಜಿಯುಳ್ಳ ಸಮಾನ ಮನಸ್ಕ ದೇಶಪ್ರೇಮಿ ಯುವಜನರು ಸೇರಿ “ದೇಶಕ್ಕಾಗಿ ನಾವು” ಎಂಬ ಘೋಷಣೆಯೊಂದಿಗೆ “ಟೀಮ್ ಇಂಡಿಯಾ” ಎಂಬ ವೇದಿಕೆಯನ್ನು ಕಟ್ಟಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಅದರ ಹೊರಗಡೆಯೂ ವಿವಿಧ ಕಾರ್ಯಕ್ರಮಗಳ ಮೂಲಕ ಈ ತಂಡ ಕಾರ್ಯಾಚರಿಸುತ್ತದೆ.‌ ಸುಳ್ಳುಗಳನ್ನು ಬಯಲುಗೊಳಿಸುವುದು, ಸತ್ಯವನ್ನು ಪ್ರಚುರ ಪಡಿಸುವುದು, ವಾಸ್ತವವನ್ನು ಜನರ ಮುಂದಿಡುವುದು ಈ ತಂಡದ ಕಾರ್ಯಯೋಜನೆ.

ಸರ್ವಾಧಿಕಾರಿ, ಮತೀಯವಾದಿ, ಕಾರ್ಪೊರೇಟ್ ಉದ್ಯಮಿಗಳ ಪರವಾದ ನರೇಂದ್ರ ಮೋದಿ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಉದ್ದೇಶ. ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತತೆಯನ್ನು ರಕ್ಷಿಸುವುದು, ಜನತೆಯ ಸಂವಿಧಾನಬದ್ದ ಹಕ್ಕುಗಳನ್ನು ಎತ್ತಿ ಹಿಡಿಯುವುದು ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಈ ಆಶಯ, ಉದ್ದೇಶಗಳಲ್ಲಿ ಸಹಮತವುಳ್ಳ ಯಾರು ಬೇಕಾದರೂ ನಮ್ಮ ತಂಡದ ಭಾಗವಾಗಬಹುದು. ಸಾಮಾಜಿಕ ಜಾಲತಾಣದಲ್ಲಿ, ಅಥವಾ ನೀವಿರುವ ಊರುಗಳಲ್ಲಿ ನಮ್ಮ ತಂಡದ ಸದಸ್ಯರ ಜೊತೆ ಕೈ ಜೋಡಿಸಬಹುದು, ಅಥವಾ ನಿಮ್ಮ ಊರುಗಳಲ್ಲಿ ಸ್ವತಃ ನೀವೆ ನಿಮ್ಮ ಗೆಳೆಯರನ್ನು ಜೊತೆ ಸೇರಿಸಿ “ಟೀಮ್ ಇಂಡಿಯಾ” ವನ್ನು‌ ಸಂಘಟಿಸಬಹುದು. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ನಿಮ್ಮ ಮುಂದಿಡುತ್ತೇವೆ ಎಂದು “ಟೀಮ್ ಇಂಡಿಯಾ” ನಾಯಕರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos