ಮಾ.1,ನ್ಯೂಸ್ ಎಕ್ಸ್ ಪ್ರೆಸ್, ಕೊಪ್ಪಳ : ಟ್ರ್ಯಾಕ್ಟರ್ ಪಲ್ಟಿಹೋಡೆದು 3 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದ ಬಳಿ ನಡೆದಿದೆ.
ಪ್ರತಿಭಟನೆಗಾಗಿ ಕೊಪ್ಪಳಕ್ಕೆ ಬಂದಿದ್ದ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಮರಳಿ ಊರಿಗೆ ಹೋಗುವಾಗ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಹೋಡೆದೆ. ಘಟನೆಯಲ್ಲಿ ಹನುಮಂತಪ್ಪ (60), ಹುಲಿಗೆಮ್ಮ (40), ಅಂಬಮ್ಮ (70) ಮೃತಪಟ್ಟಿದ್ದಾರೆ. 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.