ಡಿ. 22 : ಕ್ಯಾಲ್ಷಿಯಂ, ಕಬ್ಬಿಣ, ರಂಜಕ, ಪೊಟ್ಯಾಶಿಯಂ, ಮ್ಯಾಗ್ನಿಶಿಯಂ ಮತ್ತು ಸತುವಿನ ಅಂಶವಿರೋದ್ರಿಂದ ಖರ್ಜೂರ ಆರೋಗ್ಯಕ್ಕೆ ಒಳ್ಳೆಯದು.ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ.ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರಮುಖ ಆಹಾರಗಳಲ್ಲಿ ಖರ್ಜೂರವೂ ಒಂದು. ಸೌದಿ ಅರೇಬಿಯಾ ಹಾಗೂ ಈಜಿಪ್ತ್ ನಲ್ಲಿ ವಿಶಿಷ್ಟ ಬಗೆಯ ಖರ್ಜೂರಗಳು ಸಿಗುತ್ತವೆ. ಪೋಷಕಾಂಶ, ಖನಿಜಾಂಶ, ಎನರ್ಜಿ, ಸಕ್ಕರೆ ಹಾಗೂ ಫೈಬರ್ ಖರ್ಜೂರದಲ್ಲಿ ಹೇರಳವಾಗಿದೆ.
ಎಲುಬನ್ನು ಗಟ್ಟಿಗೊಳಿಸುತ್ತದೆ : ಸಲೆನಿಯಂ, ಮ್ಯಾಂಗನೀಸ್, ತಾಮ್ರ ಮತ್ತು ಮ್ಯಾಗ್ನಿಶಿಯಂ ಅಂಶಗಳು ಇರುವುದರಿಂದ ಖರ್ಜೂರ ನಿಮ್ಮ ಎಲುಬಿಗೆ ಅತ್ಯಂತ ಅವಶ್ಯಕ. ನಿಮ್ಮ ಎಲುಬಿನ ಆರೋಗ್ಯವನ್ನು ಕಾಪಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಬೆಸ್ಟ್ : ಖರ್ಜೂರದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಇದೆ. ಖರ್ಜೂರ ತಿಂದ್ರೆ ನಿಮ್ಮ ಚರ್ಮದಲ್ಲಿನ ಪುನಶ್ಚೈತನ್ಯ ಶಕ್ತಿಯನ್ನು ಕಾಪಾಡಿಕೊಳ್ಳಬಹುದು, ನಿಮ್ಮ ಚರ್ಮವನ್ನು ಮೃದುವಾಗಿಡಲು ಕೂಡ ಅದು ಸಹಕಾರಿ. ಚರ್ಮದ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ. ಆಯಂಟಿ ಏಜಿಂಗ್ ಕೂಡ ಹೌದು.
ಜೀರ್ಣಶಕ್ತಿ ಹೆಚ್ಚಿಸುತ್ತದೆ : ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಿ. ಅದರಿಂದ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.