ಮೇಘಾಲಯ, ಸೆ. 26 : ಮೇಘಾಲಯ ಪಶ್ಚಿಮ ಗರೋ ಹಿಲ್ಸ್ ಜಿಲ್ಲಾಧಿಕಾರಿ ಪ್ರತಿವಾರ ಸುಮಾರು 10 ಕಿಮೀ ನಡೆದುಕೊಂಡು ಹೋಗಿ, ತರಕಾರಿ ತರುತ್ತಾರೆ . ಜಿಲ್ಲಾಧಿಕಾರಿ ರಾಮ್ ಸಿಂಗ್ ಈ ಪದ್ಧತಿ ಪ್ರತಿವಾರ ಪಾಲಿಸುತ್ತಿದ್ದು, ಹಣ್ಣು ತರಕಾರಿ ತರಲು ಬಿದಿರಿನ ಬುಟ್ಟಿಯನ್ನು ಹಾಕಿಕೊಂಡು ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಾರೆ.
ಮಾತನಾಡಿರುವ ಅವರು, ಆರೋಗ್ಯದೊಂದಿಗೆ ಟ್ರಾಫಿಕ್ ಜಂಜಾಟವೂ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪರಿಸರ ಪ್ರೇಮಿಯಾಗಿರುವ ಅವರು, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲ ಬಳಸುವುದಿಲ್ಲ. ಪ್ಲಾಸ್ಟಿಕ್ ಚೀಲದ ಬದಲಿಗೆ, ಬಿದಿರಿನ ಬುಟ್ಟಿ ಬಳಸುತ್ತಾರೆ. ಇದರೊಂದಿಗೆ ಸ್ಥಳೀಯ ರೈತರಿಗೆ ಸಹಾಯವಾಗುವ ದೃಷ್ಟಿಯಿಂದಲೂ ಸಾವಯವ ತರಕಾರಿ ಹಾಗೂ ಹಣ್ಣುಗಳನ್ನು ಮಾತ್ರ ಖರೀದಿಸುತ್ತಾರೆ.