ತಮಿಳುನಾಡಿಗೆ ನಮ್ಮ ರಾಜ್ಯದಿಂದ 9.19 ಟಿಎಂಸಿ ನೀರು ಬಿಡುವಂತೆ ಆದೇಶ

ತಮಿಳುನಾಡಿಗೆ ನಮ್ಮ ರಾಜ್ಯದಿಂದ 9.19 ಟಿಎಂಸಿ ನೀರು ಬಿಡುವಂತೆ ಆದೇಶ

ನವದೆಹಲಿ, ಮೇ . 28, ನ್ಯೂಸ್ ಎಕ್ಸ್ ಪ್ರೆಸ್: ಮುಂಗಾರು ಹಂಗಾಮಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆ, ಬೇಸಿಗೆ ಮುಗಿಯುವವರೆಗೆ ನೀರಿನ ನಿರ್ವಹಣೆ, ಮತ್ತಿತರ ವಿಷಯಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇಂದು ನಡೆಯಿತು.

ಇದೇ ವೇಳೆ ಸಭೆಯಲ್ಲಿ ತಮಿಳುನಾಡಿಗೆ ನಮ್ಮ ರಾಜ್ಯದಿಂದ 9.19 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಿದೆ. ಇನ್ನು ರಾಜ್ಯದಲ್ಲಿ ಬರಗಾಲದ ಸನ್ನಿವೇಶವಿದ್ದು, ಪ್ರಾಧಿಕಾರ ನೀಡಿರುವ ಈ ಆದೇಶ ಕಾವೇರಿಕೊಳ್ಳದ ಜನಗೆ ಬಹುದೊಡ್ಡ ಹೊಡೆತವಾಗಿದೆ ಎನ್ನಲಾಗುತ್ತಿದ. ಈ ಬಾರಿ ಮುಂಗಾರು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬರೋದಿಲ್ಲ ಅಂತ ಹವಾಮಾನ ಇಲಾಖೆ ಹೇಳಿರುವುದು ಕೂಡ ದೊಡ್ಡ ಮಟ್ಟದ ಹೊಡೆತ ಬೀಳಲಿದೆ ಎನ್ನಲಾಗಿದೆ.

ಇನ್ನು ಪ್ರಾಧಿಕಾರದ ಆದೇಶಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಕುಡಿಯುವ ನೀರಿಗಾಗಿ ಜಲಾಯಶಗಳಲ್ಲಿ ನೀರಿದ್ದು, ಎಲ್ಲಿಂದ ನೀರು ತರುವುದಕ್ಕೆ ಸಾಧ್ಯ. ಈ ಬಗ್ಗೆ ಪ್ರಧಾನಿ ಮೋದಿಯವರು ಕೂಡಲೇ ಮಧ್ಯಪ್ರವೇಶ ಮಾಡಿ, ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮುಂದಾಗಬೇಕು. ಇದಲ್ಲದೇ ರಾಜ್ಯದ ಪ್ರತಿನಿಧಿಗಳು ಕೂಡ ಈ ಬಗ್ಗೆ ತಮ್ಮ ವಾದವನ್ನು ಸರಿಯಾಗಿ ತಿಳಿಸಿ, ನಮ್ಮ ಪರವಾಗಿ ಜಯಗಳಿಸ ಬೇಕು ಅಂತ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos