ತ.ನಾಡಿಗೆ ನೀರು ಬಿಡಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ

ತ.ನಾಡಿಗೆ ನೀರು ಬಿಡಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ

ನವದೆಹಲಿ, ಜೂ. 25: ಇಂದು ದೆಹಲಿಯ ಜಲ ಆಯೋಗದ ಕಚೇರಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 4ನೇ ಸಭೆ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಸಭೆ ನಡೆಯಿತು. ಇದೇ ವೇಳೆ ಸಭೆಯಲ್ಲಿ ಕರ್ನಾಟಕ ಕೇರಳ ತಮಿಳುನಾಡು ಪುದುಚೇರಿ ರಾಜ್ಯದ ಪ್ರತಿನಿಧಿಗಳು ಹಾಜರಿದ್ದರು.

ಕಾವೇರಿಕೊಳ್ಳದಲ್ಲಿ ಮಳೆಯಾಗಿ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದಾರೆ ಮಾತ್ರ ತಮಿಳುನಾಡಿಗೆ ನೀರು ಬಿಡಿ ಅಂತ ಸಭೆಯ ಅಧ್ಯಕ್ಷತೆ ವಹಿಸಿದ್ದ ಹುಸೇನ್ ಅವರು ಆದೇಶ ಹೊರಡಿಸಿದ್ದು, ಈ ಮೂಲಕ ನಿಮ್ಮ ಪಾಲನ್ನು ನೀವು ಪಡೆದುಕೊಳ್ಳಿ ಅಂತ ತಮಿಳುನಾಡಿಗೆ ಹೇಳಿದ್ದಾರೆ.

ಇನ್ನು ಸಭೆಯಲ್ಲಿ ತಮಿಳುನಾಡು ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರನ್ನು ಬೀಡಬೇಕು ಅಂತ ಸಭೆಯಲ್ಲಿ ಒತ್ತಾಯ ಮಾಡಿತ್ತು, ಇದಲ್ಲದೇ ಕರ್ನಾಟಕ ಕೂಡ ಕಾವೇರಿ ಕೊಳ್ಳದಲ್ಲಿ ಮಳೆಯಾದ್ರೆ ನೀರನ್ನು ಬಿಡುವುದಕ್ಕೆ ಸಾಧ್ಯವಾಗುತ್ತದೆ. ಮಳೆಯಾಗದೇ ಇದ್ದ ವೇಳೆಯಲ್ಲಿ ನೀರನ್ನು ಬಿಡಲು ಹೇಗೆ ಸಾಧ್ಯ ಪ್ರಶ್ನೆ ಮಾಡಿತ್ತು. ಇದಲ್ಲದೇ ಮೇಕೆದಾಟು ಯೋಜನೆಗೂ ಕೂಡ ತಮಿಳುನಾಡು ಸಭೆಯಲ್ಲಿ ತೀವ್ರತರನಾದ ಆಕ್ಷೇಪ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಜೂನ್ 30 ರೊಳಗೆ ನೀರನ್ನು ಕರ್ನಾಟಕ ಹರಿಸಬೇಕು ಅಂತ ತಮಿಳುನಾಡು ಪ್ರತಿನಿಧಿಗಳು ಒತ್ತಾಯಿಸಿದ್ದರು.

ಕಳೆದ ಸಭೆಯಲ್ಲಿ ಮುಂಗಾರು ಸಹಜವಾಗಿದ್ದರೆ ಜೂನ್ ತಿಂಗಳ ತಮಿಳುನಾಡು ಪಾಲಿನ ನೀರು 9.19 ಟಿಎಂಸಿ ಬಿಡುಗಡೆ ಮಾಡುವಂತೆ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಆದರೆ ಕರ್ನಾಟಕದಲ್ಲಿ ಮುಂಗಾರು ಸಮಯಕ್ಕೆ ಸರಿಯಾಗಿ ಬಾರದೇ ಇರುವುದರಿಂದ ತಮಿಳುನಾಡಿನ ಪಾಲಿನ ನೀರು ಹರಿಸೋಕೆ ಕರ್ನಾಟಕದಿಂದ ಸಾಧ್ಯವಾಗಿಲ್ಲ. ಕೇವಲ ಸುಮಾರು ಎರಡು ಟಿಎಂಸಿಯಷ್ಟು ನೀರು ಹರಿಸಲಷ್ಟೆ ಕರ್ನಾಟಕಕ್ಕೆ ಸಾಧ್ಯವಾಗಿರುವುದರಿಂದ ಉಳಿದ ನೀರಿಗಾಗಿ ತಮಿಳುನಾಡು ಪ್ರಾಧಿಕಾರದ ಮೊರೆ ಹೋಗಿತ್ತು ಆ ಬಗ್ಗೆ ಇಂದು ಸಭೆ ನಡೆದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos