ಕೆ.ಆರ್.ಪುರ, ಜ. 04: ಶ್ರೀ ಮಹಾಬಲೇಶ್ವರ ದೇವಸ್ಥಾನದ ತಾತ್ಕಾಲಿಕ ಅರ್ಚಕ ವೆಂಕಟೇಶ್ ದೇವಾಲಯ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಹಣವನ್ನು ದುರುಪಯೋಗ ಪಡಿಸಿದ್ದಲ್ಲದೆ ದೇವಾಲಯಕ್ಕೆ ಬರುವ ಭಕ್ತರಿಗೆ ನಾನಾ ರೀತಿಯ ಕಿರುಕುಳ ನೀಡುತ್ತಾ ದೌರ್ಜನ್ಯ ದಿಂದ ವರ್ತಿಸುತ್ತಿರುತ್ತಿರುವ ಬಗ್ಗೆ ದೂರುಗಳು ಬಂದಿರುತ್ತವೆ ಈ ಆರೋಪಗಳ ಆಧಾರದ ಮೇಲೆ ಅರ್ಚಕನನ್ನು ಬದಲಾಯಿಸಲಾಗುತ್ತದೆ ಎಂದು ಬೆಂ. ಪೂರ್ವ ತಾಲ್ಲೂಕು ದಂಡಾಧಿಕಾರಿ ಎನ್.ತೇಜಸ್ ಕುಮಾರ್ ತಿಳಿಸಿದರು.
ಕೆ.ಆರ್.ಪುರದ ತಾಲೂಕು ಕಚೇರಿಯಲ್ಲಿ ಗ್ರಾಮದ ಹಿರಿಯರು ಹಾಗೂ ಮುಜರಾಯಿ ಇಲಾಖೆ ಸಮ್ಮುಖದಲ್ಲಿ ಏರ್ಪಡಿಸಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ಮುಚ್ಚಿದ ದೇವಸ್ಥಾನದ ಬಾಗಿಲನ್ನು ತೆರೆಯಲು ಗ್ರಾಮಸ್ಥರ ಒಪ್ಪಿಗೆ ಮೇರೆಗೆ ದೇವಾಲಯದಲ್ಲಿ ಪೂಜೆ ನಡೆಯಲು ನೂತನ ಅರ್ಚಕರನ್ನು ನಿಯಮಿಸಿ ಪೂಜೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಭಕ್ತರ ಧಾರ್ಮಿಕ ಭಾವನೆಗಳ ಜೊತೆ ಆಟವಾಡಬಾರದು ಇಂತಹ ಕೆಲಸಕ್ಕೆ ಮುಂದಾಗಿರುವ ಅರ್ಚಕ ವೆಂಕಟೇಶ್ ದೀಕ್ಷಿತ್ ರನ್ನು ಕಾನೂನು ಕ್ರಮ ಅನುಸರಿಸಿ ವಜಾ ಮಾಡಿ ಗ್ರಾಮಸ್ಥರು ನೀಡಿರುವ ಹಲವಾರು ಸಾಕ್ಷಿಪುರವೆಗಳು ಹಾಗೂ ಸ್ವತಃ ಅರ್ಚಕರೆ ತಪ್ಪ ಒಪ್ಪಿಕೊಂಡಿರುವುದರಿಂದ ಬೇರೆ ಅರ್ಚಕರನ್ನು ದೇವಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ 21 ರಿಂದ ಜನವರಿ 3 ವರಿಗೂ ದೇವಾಲಯ ಮುಚ್ಚಲಾಗಿತ್ತು ದೇವಾಲಯದ ಭಾಗಿಳನ್ನು ತೆಗಿಯುವಂತೆ ಸೂಚಿಸಲಾಗಿದೆ ಎಂದರು.
ದೇವಾಲಯದ ಹುಂಡಿಯ ಹಣವನ್ನು ಸರ್ಕಾರಕ್ಕೆ ಒಪ್ಪಿಸದೆ, ದೇವಾಲಯದ ಹಣವನ್ನು ಅಕ್ರಮವಾಗಿ ಸ್ವಂತಕ್ಕೆ ಬಳಸಿರುವುದು ಕಾನೂನು ಬಹಿರ ಎಂದರು. ದೇವಾಲಯವನ್ನು ಅಭಿವೃದ್ಧಿ ಮಾಡುಲು ಸ್ಥಳೀಯ ಶಾಸಕರ ಬಳಿ ಮನವಿ ಮಾಡಿ 5 ಲಕ್ಷ ಅನುದಾನ ಪಡೆದು ದೇವಾಲಯ ಅಭಿವೃದ್ಧಿ ಮಾಡಲಾಗಿತ್ತು ಎಂದರು.
ಅರ್ಚಕ ವೆಂಕಟೇಶ್, ಜಾತಿ ಜನಾಂಗ, ಮೇಲು ಕೀಲು ಎಂಬ ತಾರತಮ್ಯ ಭಾವನೆಯಿಂದ ಪೂಜೆ ಮಾಡುತ್ತಿದ್ದಾರೆ, ಅರ್ಚಕನ ಬದಲಾವಣೆ ಮಾಡಲು ತಹಶಿಲ್ದಾರರ ತೀರ್ಮಾನ ನಮಗೆ ಸಂತಸ ತಂದಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಹಾಳಿ ಅರ್ಚಕ ವೆಂಕಟೇಶ್ ದೀಕ್ಷಿತ್ ದಂಪತಿ, ಬ್ರಹ್ಮನ ನಿಗಮ ಮಂಡಳಿ ಅಧ್ಯಕ್ಷ ಸಚಿದಾನಂದ ಮೂರ್ತಿ, ಮುಜರಾಯಿ ಇಲಾಖೆಯ ಅಧಿಕಾರಿ ದಿನೇಶ್, ಸ್ಥಳೀಯರಾದ ಮುರಳಿ, ಮುನಿಯಪ್ಪ, ಮಂಜುನಾಥ್, ರವಿ, ಗ್ರಾಮದ ಮುಖಂಡರು ಹಾಗೂ ಸ್ಥಳೀಯ ಪೋಲೀಸರು ಹಾಜರಿದ್ದರು.