ಆನೇಕಲ್, ಆ. 31: ಕರ್ನಾಟಕ ಪಬ್ಲಿಕ್ ಶಾಲೆ ಎಲ್ ಕೆಜಿ ವಿದ್ಯಾರ್ಥಿಗಳು ಇಲ್ಲಿನತಾಲ್ಲೂಕು ಪಂಚಾಯಿತಿಯ ವೀಕ್ಷಣೆ ಮಾಡಲು ಭೇಟಿ ನೀಡಿದ್ದರು.
2019-20ನೇ ಸಾಲಿನಲ್ಲಿ ನೂತನವಾಗಿ ಪ್ರಾರಂಭವಾದ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆನೇಕಲ್ ಕೂಡ ಒಂದಾಗಿದ್ದು, ಇಲ್ಲಿ ಎಲ್ಕೆಜಿ ಇಂದ 12ನೇ ತರಗತಿವರೆಗೂ ಇದ್ದು ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸಲಾಗಿದೆ. ಎಲ್ಕೆಜಿ ಹಂತದಿಂದಲೇ ಹೊರ ಸಂಚಾರದಕಲ್ಪನೆ ಮೂಡಿಸಿ ಅವರಲ್ಲಿ ನೆನಪಿನ ಶಕ್ತಿ ಹೆಚ್ಚಿಸುವುದುಇದರ ಉದ್ದೇಶವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಎಲ್ ಕೆಜಿ ವಿದ್ಯಾರ್ಥಿಗಳು ಇಲ್ಲಿನ ತಾಲ್ಲೂಕು ಪಂಚಾಯಿತಿಯ ವೀಕ್ಷಣೆ ಮಾಡಲು ಭೇಟಿ ನೀಡಿದ ಸಂದರ್ಭದಲ್ಲಿ ಶಿಸ್ತಿನಿಂದ ಸಮವಸ್ತ್ರದೊಂದಿಗೆ ಆಗಮಿಸಿದ ಪುಟಾಣಿಗಳು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ.ದೇವರಾಜ್ ಗೌಡ ಅವರುಸ್ವಾಗತಿಸಿ ಕಚೇರಿಯಲ್ಲಿನ ವಾತಾವರಣವನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥರೆಡ್ಡಿ (ಎನ್ಎಂಆರ್) ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕಎಸ್. ನಾಗರಾಜು, ಸಿಬ್ಬಂದಿಗಳಾದ ಟಿ.ವಿ.ಮೂರ್ತಿ, ಚಂದ್ರಕಲಾ, ತಾಲ್ಲೂಕು ಸಂಯೋಜಕಕೆ. ಚಂದ್ರಶೇಖರ್ ವಣಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರರೆಡ್ಡಿ ಮುಂತಾದವರು ಹಾಜರಿದ್ದರು.
ಕರ್ನಾಟಕ ಪಬ್ಲಿಕ್ ಶಾಲೆಯಎಲ್ಕೆಜಿ ವಿದ್ಯಾರ್ಥಿಗಳು ಆನೇಕಲ್ ತಾಲ್ಲೂಕು ಪಂಚಾಯಿತಿಯ ವೀಕ್ಷಣೆ ಮಾಡಲು ಭೇಟಿ ನೀಡಿದ್ದರು. ಪುಟಾಣಿಗಳನ್ನು ತಾಲ್ಲೂಕು ಪಂಚಾಯಿತಿಕಾರ್ಯನಿರ್ವಾಹಕಅಧಿಕಾರಿ ಕೆ.ಸಿ.ದೇವರಾಜ್ ಗೌಡ ಸ್ವಾಗತಿಸಿದರು.