ಕೆಎಸ್ಆರ್ಟಿಸಿ ಯಿಂದ ಶಿವರಾತ್ರಿ ಹಬ್ಬಕ್ಕೆ ಸಿಹಿ ಸುದ್ದಿ

ಕೆಎಸ್ಆರ್ಟಿಸಿ ಯಿಂದ ಶಿವರಾತ್ರಿ ಹಬ್ಬಕ್ಕೆ ಸಿಹಿ ಸುದ್ದಿ

ಬೆಂಗಳೂರು, ಫೆ. 19: ಇನ್ನೇನು ಮಹಾಶಿವರಾತ್ರಿ ಬಂದೇಬಿಡ್ತು ಶಿವರಾತ್ರಿ ಹಬ್ಬಕ್ಕೆ ಊರಿಂದ ಊರಿಗೆ ಹೋಗುವವರು ಹೆಚ್ಚಾಗಿರುವುದರಿಂದ ಕೆಎಸ್ಆರ್ಟಿಸಿ ವತಿಯಿಂದ ಶಿವರಾತ್ರಿ ಹಬ್ಬಕ್ಕೆಂದು ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಹೌದು, ನಾಡಿನಾದ್ಯಂತ ಭಕ್ತಿಭಾವದಿಂದ ಆಚರಿಸಲ್ಪಡುವ ಮಹಾ ಶಿವರಾತ್ರಿ ಹಬ್ಬದಲ್ಲಿ ಪಾಲ್ಗೊಳ್ಳಲು ಊರಿಂದ ಊರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಿದೆ.

ಹಬ್ಬಕ್ಕಾಗಿ ಬೆಂಗಳೂರು ನಗರದಿಂದ ತಮ್ಮ ತಮ್ಮ ಊರುಗಳಿಗೆ ಹೊರಡುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಎಸ್ಆರ್ಟಿಸಿ 300 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಿದ್ದು, ಪ್ರಮುಖವಾಗಿ ನಗರದಿಂದ ದೂರದ ಊರುಗಳಿಗೆ ಸಂಚರಿಸುವರಿಗೆ ಹೆಚ್ಚುವರಿ ಬಸ್ ಸೇವೆಯನ್ನು ನಾಳೆ ಮತ್ತು ನಾಳಿದ್ದು ಅಂದರೆ ದಿನಾಂಕ 20 ಮತ್ತು 21 ರಂದು ನೀಡುತ್ತಿದೆ.

ನಂತರ ರಾಜ್ಯ ಸೇರಿದಂತೆ ಹೊರರಾಜ್ಯಗಳ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ದಿನಾಂಕ 23 ರಂದು ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos