ಸುರೇಶ್ ಅಂಗಡಿ ನಿಧನ ಶ್ರದ್ದಾಂಜಲಿ

ಸುರೇಶ್ ಅಂಗಡಿ ನಿಧನ ಶ್ರದ್ದಾಂಜಲಿ

ಚಿಕ್ಕನಾಯಕನಹಳ್ಳಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನದಿಂದಾಗಿ ಪಕ್ಷ, ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ. ಜಗದೀಶ್ ತಿಳಿಸಿದರು.
ಪಟ್ಟಣದ ನೆಹರೂವೃತ್ತದ ಬಳಿ ತಾಲ್ಲೂಕು ಬಿಜೆಪಿಯಿಂದ ಸಚಿವಸುರೇಶ್ ಅಂಗಡಿಯವರ ಅಕಾಲಿಕ ನಿಧನದ ಸಂಬAಧ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದ ಅವರು ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಮರ್ಥ ನಾಯಕರಾಗಿದ್ದ ಅವರು ದೀನ ದಲಿತರ ಬಗ್ಗೆ ಕಾಳಜಿಯಿಂದ ಕೆಲಸ ಮಾಡಿಕೊಂಡು ಬಂದಿದ್ದರು. ಉದ್ಯಮಿಯಾಗಿದ್ದರೂ ಕೃಷಿಕರಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ತಳಮಟ್ಟದಿಂದ ದುಡಿದು ಹಂತಹಂತವಾಗಿ ಮೇಲೇರಿದ್ದರು.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಹೊಸಕೆರೆ ಮಲ್ಲಿಕಾರ್ಜುನ್, ಅಣೇಕಟ್ಟೆ ಸಿದ್ದರಾಮಣ್ಣ, ಹನುಮಜಯ, ಗೌತಂ, ಕುದುರೆಗಾಡಿ ನರಸಿಂಹಮೂರ್ತಿ, ಶರತ್ ಮುಂತಾದವರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos