ದುಬೈ, ಅ. 15: ಕಳೆದ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಟೀಕೆಗೆ ಒಳಗಾದ ಸೂಪರ್ ಓವರ್ ನ ಬೌಂಡರಿ ಕೌಂಟ್ ನಿಯಮವನ್ನು ಐಸಿಸಿ ಬದಲಾಯಿಸಿದೆ.
ವಿಶ್ವ ಕೂಟಗಳ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಗಳಿಸಿದ ರನ್ ಒಂದೇ ಆಗಿದ್ದರೆ ಒಂದು ಓವರ್ ಸೂಪರ್ ಓವರ್ ಆಡಿಸಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ಕೂಡಾ ಸಮ-ಸಮ ಆದರೆ ಈವರೆಗೆ ಆಗ ಯಾವ ತಂಡ ಅತೀ ಹೆಚ್ಚು ಬೌಂಡರಿ ಬಾರಿಸುತ್ತದೆಯೋ ಆ ತಂಡ ವಿಜಯಿ ಎಂದು ಘೋಷಿಸಲಾಗುತಿತ್ತು. ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ಜಯ ಗಳಿಸಿದ್ದು ಕೂಡಾ ಇದೇ ಮಾದರಿಯಲ್ಲಿ.
ಆದರೆ, ಈ ನಿಯಮಕ್ಕೆ ಬಹಳಷ್ಟು ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಐಸಿಸಿ ಈ ನಿಯಮವನ್ನು ಬದಲಿಸಿದೆ. ಮುಂದಿನ ದಿನಗಳಲ್ಲಿ ಸೂಪರ್ ಓವರ್ ಟೈ ಆದ ಸಂದರ್ಭ ಬೌಂಡರಿ ಕೌಂಟ್ ಮಾಡಲಾಗುವುದಿಲ್ಲ. ಬದಲಾಗಿ ಯಾವುದಾದರೂ ಒಂದು ತಂಡ ವಿಜಯಿಯಾಗುವರೆಗೆ ಸೂಪರ್ ಓವರ್ ಆಡಿಸಲಾಗುತ್ತದೆ.