ಮಾ.1,ನ್ಯೂಸ್ ಎಕ್ಸ್ ಪ್ರೆಸ್, ಮಂಡ್ಯ: ಲೋಕಸಭಾ ಕ್ಷೇತ್ರದ ಚುನಾವಣಾ ರಂಗು ಪಡೆದಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಗ ನಿಖಿಲ್ ಹಾಗೂ ಅಂಬರೀಶ್ ಪತ್ನಿ ಸುಮಲತಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಜೆಡಿಎಸ್ನ ಕಟ್ಟಿ ಹಾಕಲು ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಸುಮಲತಾ ಅಂಬರೀಶ್ ಬೆಂಬಲಿಸಲು ಚಿಂತನೆ ನಡೆಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಏಳಕ್ಕೆ ಏಳು ಜೆಡಿಎಸ್ ಅಭ್ಯರ್ಥಿಗಳನ್ನ ಬೆಂಬಲಿಸುವ ಜೆಡಿಎಸ್ಗೆ ಕ್ಲೀನ್ಸ್ವೀಪ್ ಕೊಟ್ಟಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಜೆಡಿಎಸ್ ಮೈತ್ರಿ ನಾಯಕರ ಜೊತೆ ಮಂಡ್ಯವನ್ನು ಜೆಡಿಎಸ್ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಯಾವೊಬ್ಬ ತನ್ನ ಶಾಸಕರಿಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಹೆಸರನ್ನ ತೇಲಿಬಿಟ್ಟು ಜೆಡಿಎಸ್ ಕಟ್ಟಿಹಾಕಲು ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.
ಈ ನಡುವೆ ಜೆಡಿಎಸ್ಗೆ ಮಂಡ್ಯ ಕ್ಷೇತ್ರವನ್ನ ಬಿಟ್ಟುಕೊಡಲು ಕೆಲ ಕಾಂಗ್ರೆಸ್ ನಾಯಕರು ಸಮ್ಮತಿ ಸೂಚಿಸಿದ್ದಾರೆ, ಹೀಗಾಗಿ ಒಂದೆಡೆ ನಿಖಿಲ್ ಈಗಾಗಲೇ ತಮ್ಮ ಪಕ್ಷದ ಮುಖಂಡರ ಜೊತೆ ಕ್ಷೇತ್ರ ಪ್ರವಾಸಕ್ಕಿಳಿದಿದ್ದಾರೆ. ಅಲ್ಲದೇ ಮಂಡ್ಯದ ಗಂಡು ಅಂತಾನೇ ಹೆಸರುವಾಸಿಯಾಗಿದ್ದ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಜಿಲ್ಲೆಯಲ್ಲಿ ಅನುಕಂಪದ ಅಲೆ ಎದ್ದಿದ್ದು, ಇನ್ನೊಂದು ಕಡೆ ಪತ್ನಿ ಸುಮಲತಾ ಅಂಬರೀಶ್ ಕೂಡ ಪಕ್ಷದ ತೀರ್ಮಾನಕ್ಕಿಂತ ಜನಾಭಿಪ್ರಾಯಕ್ಕೆ ಆದ್ಯತೆ ನೀಡುತೇನೆ ಅಂತಾ ಪ್ರಚಾರಕ್ಕಿಳಿದಿದ್ದಾರೆ ಇನ್ನೊಂದೆಡೆ ಆಪರೇಷನ್ ಕಮಲ ವಿಚಾರದಲ್ಲಿ ತಮ್ಮನ್ನ ಇಕ್ಕಟ್ಟಿಗೆ ಸಿಲುಕಿಸಿದ ಜೆಡಿಎಸ್ಗೆ ಹೇಗಾದರೂ ಮುಖಭಂಗ ಮಾಡಬೇಕೆಂಬ ಉದ್ದೇಶವನ್ನೊಂದಿರುವ ಬಿಜೆಪಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೀಳಿಸದೆ ಸುಮಲತಾ ಅಂಬರೀಶ್ ಬೆಂಬಲಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಅಲ್ಲದೇ ಸುಮಲತಾ ಅವರನ್ನ ಗೆಲ್ಲಿಸುವ ಮತ್ತು ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೆಗಲಿಗೆ ಅಮಿತ್ ಶಾ ಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಕಾಂಗ್ರೆಸ್ ನಾಯಕರು ಕೂಡ ಮಂಡ್ಯದಲ್ಲಿ ತಮ್ಮ ಅಸ್ತಿತ್ವನ್ನ ಹೇಗಾದರೂ ಕಾಪಾಡಿಕೊಳ್ಳಲೇ ಬೇಕೆಂದು ಸುಮಲತಾರನ್ನ ಸ್ವತಂತ್ರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ತಂತ್ರ ಹೂಡಿದ್ದಾರೆ. ಅದರಂತೆ ಕಳೆದ 2 ದಿನಗಳಿಂದ ಮಂಡ್ಯ ಪ್ರವಾಸದಲ್ಲಿರುವ ಸುಮಲತಾರವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.