ಮಂಡ್ಯ ಏ. 16, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ, ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದಾರೆ. ಇನ್ನೊಂದೆಡೆ ಅಂಬರೀಶ್ ಹಾಗೂ ದರ್ಶನ್ ಅಭಿಮಾನಿಯೊಬ್ಬರು, ಸುಮಲತಾ ಅಂಬರೀಶ್ ಅವರ ಕ್ರಮಸಂಖ್ಯೆ 20 ಅನ್ನು ತಲೆ ಮೇಲೆ ಬರೆಸಿಕೊಳ್ಳುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಅಭಿಮಾನಿ ಗೌರಿಶಂಕರ್ ಎಂಬುವವರು ಈ ವಿಭಿನ್ನ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಿಂಬದಿ ತಲೆ ಕೂದಲಲ್ಲಿ ಕ್ರಮ ಸಂಖ್ಯೆ 20 ಅಂತ ಕಾಣುವ ಹಾಗೆ ಗೌರಿಶಂಕರ್ ಕಟಿಂಗ್ ಮಾಡಿಸಿಕೊಂಡಿದ್ದಾರೆ