ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ”ಅಂಬರೀಶ್ ನಿಧನರಾದಾಗ ಅಂತ್ಯ ಸಂಸ್ಕಾರ ಮಾಡಲು ನಿಖಿಲ್ ಕುಮಾರ್ ಜಾಗ ಗುರುತು ಮಾಡಿದ್ದರು” ಎಂದು ಹೇಳಿಕೆ ನೀಡಿದ್ದ ನಿರ್ಮಾಪಕ ಮುನಿರತ್ನ ಈಗ ಅಂಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಈ ವಿಷ್ಯದ ಬಗ್ಗೆ ಅಂಬರೀಶ್ ಪತ್ನಿ ಸುಮಲತಾ ಕೂಡ ಪ್ರತಿಕ್ರಿಯಿಸಿದ್ದು, ಮುನಿರತ್ನ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ‘ಸಾವಿನಲ್ಲೂ ರಾಜಕೀಯ ಮಾಡುವ ಇಂತಹ ಬೆಳವಣಿಗೆ ಚೆನ್ನಾಗಿಲ್ಲ’ ಎಂದು ಆಕ್ರೋಶಗೊಂಡಿದ್ದಾರೆ. ನಿರ್ಮಾಪಕ ಮುನಿರತ್ನ ಹೇಳಿಕೆ ವಿರುದ್ಧ ತಿರುಗಿಬಿದ್ದ ದರ್ಶನ್-ಅಂಬಿ ಫ್ಯಾನ್ಸ್ ‘ಅಂಬರೀಶ್ ಅವರಿಂದ ಮುನಿರತ್ನ ಯಾವ ರೀತಿ ಲಾಭ ಪಡೆದುಕೊಂಡಿದ್ದಾರೆ ಎಂಬುದನ್ನ ನೆನಪಿಸಿಕೊಳ್ಳಲಿ’ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ, ನಿರ್ಮಾಪಕ ಮುನಿರತ್ನಗೆ ತಿರುಗೇಟು ನೀಡಿದ್ದಾರೆ.