ಮೈಸೂರು, ಮಾ. 30, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರ ಗೆಲುವು ಸಾಧಿಸಿಲು ಅಂಬಿ ಅಭಿಮಾನಿ ಒಬ್ಬ ಮೈಸೂರಿನ ಕೆ.ಆರ್.ನಗರದ ಬೆನಕ ಪ್ರಸಾದ್ ಎಂಬವ ಯುವಕ ಉರುಳು ಸೇವೆ ಮಾಡಿದ್ದಾರೆ.
ಇಂದು ಬೆಳಗ್ಗೆ ಕೆ.ಆರ್. ನಗರದ ಆಂಜನೇಯ ಸ್ವಾಮಿ ದೇವಾಲಯದಿಂದ ಹಳೆ ಎಡತೋರೆ ಆಂಜನೇಯ ದೇವಾಲಯದವರೆಗೆ ಉರುಳು ಸೇವೆ ಮಾಡಿದ್ದಾರೆ.
ಸುಮಾರು 4 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ ಯುವಕ ಬೆನಕ ಪ್ರಸಾದ್, ದೇವರಿಗೆ ಸುಮಲತಾ ಗೆಲುವಿಗಾಗಿ ವಿಶೇಷ ಪೂಜೆ ಸಹ ಸಲ್ಲಿಸಿದ್ದಾರೆ. ನಾನು ಅಂಬಿ ಅಭಿಮಾನಿ ಸುಮಲತಾ ಮೇಡಂಗಾಗಿ ಉರುಳು ಸೇವೆ ಮಾಡ್ತಿದ್ದೀನಿ.
ಅವರ ಗೆಲುವಿಗಾಗಿ ಪ್ರಚಾರ ಸಹ ಮಾಡುತ್ತಿದ್ದೇನೆ ಎಂದರು. ಅಲ್ಲದೇ ಉರುಳು ಸೇವೆ ಮಾಡುತ್ತಿರುವ ಯುವಕನಿಗೆ ಹಲವು ಅಂಬಿ ಅಭಿಮಾನಿಗಳು ಇದೇ ವೇಳೆ ಸಾಥ್ ನೀಡಿದರು.