ಚಾಮರಾಜನಗರ, ಡಿ. 13 : ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದು ನಾಳೆ (ಡಿ.14)ಕ್ಕೆ ಒಂದು ವರ್ಷ. ವರ್ಷದಲ್ಲಿ ಸುಳ್ವಾಡಿ ಗ್ರಾಮದಲ್ಲಿ ನಾನಾ ಬದಲಾವಣೆಗಳು ಉಂಟಾಗಿದೆ.
ಒಂದು ವರ್ಷದ ಹಿಂದೆ ನಡೆದ ಘಟನೆ ಇನ್ನೂ ಕೂಡ ಜನರಲ್ಲಿ ಮಾಸಿಲ್ಲ. ಹೌದು. ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ನಡೆದ ಕಿಚ್ ಗತ್ತಿ ಮಾರಮ್ಮನ ದೇವಾಲಯದ ವಿಷ ಪ್ರಸಾದ ಉಂಡು 17 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಆ ನಂತರ ದೇವಾಲಯಕ್ಕೆ ಸರ್ಕಾರದಿಂದ ಬೀಗ ಜಡಿಯಲಾಗಿತ್ತು. ಇದೀಗ ಪ್ರಕರಣಕ್ಕೆ ಒಂದು ವರ್ಷ ಆಗ್ತಿರೋ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲು ತೆರೆಯಬೇಕು ಅನ್ನೋದು ಭಕ್ತರ ಆಶಯವಾಗಿದೆ.