ಬೆಂಗಳೂರು. ಆ.19 : ‘ಪ್ರೀತಿಯ ಅಮ್ಮಾ, ದೇವರು ಆಯುಷ್ಯ, ಆರೋಗ್ಯವನ್ನು ಕೊಟ್ಟು ನೂರು ಕಾಲ ಕಾಪಾಡಲಿ, ನಿಮ್ಮ ಸ್ಟ್ರೆಂಥ್ ನಮಗೂ ಸಹ ಸ್ಪೂರ್ತಿ, ನಿಮಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು’ ಎಂದಿದ್ದಾರೆ ರಾಘಣ್ಣ.
ಇನ್ಪೋಸಿಸ್ ಕಂಪನಿಯ ಅಧ್ಯಕ್ಷರಾಗಿರುವ ಸುಧಾಮೂರ್ತಿ ಅವರು ಇಂದು ಜನುಮದಿನದ ಸಂಭ್ರಮದಲ್ಲಿದ್ದಾರೆ. ಸುಧಾಮೂರ್ತಿ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಬರಹಗಾರ್ತಿ. ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದರು. ಪತಿ ನಾರಾಯಣಮೂರ್ತಿ, 6 ಗೆಳೆಯರು ಜೊತೆಗೂಡಿ 1981 ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪಿಸಿದರು. ಇನ್ಪೋಸಿಸ್ ಕಂಪನಿಯ ಅಧ್ಯಕ್ಷರಾಗಿ ಹಲವಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದ್ದಾರುವ ಸುಧಾಮೂರ್ತಿ ಅವರಿಗೆ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಸಹ ಶುಭಾಶಯಗಳನ್ನು ತಿಳಿಸಿದ್ದಾರೆ.