ನಿಂಧನೆ: ಕ್ಷಮೆ ಕೋರಿದ ಸಬ್ ಇನ್ಸ್ಪೆಕ್ಟರ್

  • In State
  • December 31, 2020
  • 313 Views
ನಿಂಧನೆ: ಕ್ಷಮೆ ಕೋರಿದ ಸಬ್ ಇನ್ಸ್ಪೆಕ್ಟರ್

ಚಾಮರಾಜನಗರ: ನಗರದಲ್ಲಿ ಮತ ಎಣಿಕೆ ಕೇಂದ್ರದ ಬಳಿ ಏಜೆಂಟ್ ಹಾಗೂ ಅಭ್ಯರ್ಥಿಗಳಿಂದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಯಿತು.
ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮತ ಎಣಿಕೆ ಕೇಂದ್ರದಲ್ಲಿ ಏಜೆಂಟ್ ಹಾಗೂ ಅಭ್ಯರ್ಥಿಗಳು ಒಳ ಹೋಗುವ ವೇಳೆ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಏಜೆಂಟ್ ಹಾಗೂ ಅಭ್ಯರ್ಥಿಗಳನ್ನು ಸಬ್‌ಇನ್ಸ್ಪೆಕ್ಟರ್ ಹನುಮಂತು ಅವ್ಯಾಚ ಶಬ್ದಗಳಿಂದ ಬೈದರೆಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.
ಕೆಲಕಾಲ ಮತ ಎಣಿಕೆ ಕೇಂದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರತಿಭಟನೆಗೆ ಮುಂದಾದ ಏಜೆಂಟ್ ಹಾಗೂ ಅಭ್ಯರ್ಥಿಗಳು ಸಬ್ ಇನ್ಸ್ಪೆಕ್ಟರ್ ಕ್ಷಮೆಯಾಚನೆಗೆ ಆಗ್ರಹಿಸಿದರು.
ಮತ ಎಣಿಕೆ ಸ್ಥಳಕ್ಕೆ ತೆರಳದೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ದಿಕ್ಕಾರ ಕೂಗಿದ ಏಜೆಂಟ್ ಹಾಗೂ ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದ ಸಬ್ ಇನ್ಸ್ಪೆಕ್ಟರ್ ಹನುಮಂತು ಕೊನೆಗೂ ಕ್ಷಮೆಯಾಚಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos