ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿಯಿರಿ

ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿಯಿರಿ

ಬೆಂಗಳೂರು, ಅ. 9: ಕೆಲವರು ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿಹಾಲನ್ನು ಕುಡಿದು ಮಲಗುವುದು ಸಾಮಾನ್ಯ. ಹಲವೆಡೆ ಈ ಹಾಲಿಗೆ ಅರಿಶಿನದ ಪೂಡಿ ಹಾಕಿದರೆ ಇನ್ನೂ ಕೆಲವೆಡೆ ಒಂದು ಚಮಚ ತುಪ್ಪವನ್ನು ಬೆರೆಸಿ ಕೂಡಿಯುತ್ತಾರೆ.  ಹೌದು, ಸಾಮಾನ್ಯವಾಗಿ ಹಾಲು ತುಪ್ಪಗಳು ಕೊಂಚ ದುಬಾರಿಯಾಗಿರುವ ಕಾರಣ ನಿತ್ಯವೂ ತುಪ್ಪ ಬೆರೆಸಿದ ಹಾಲನ್ನು ಕುಡಿಯಲು ಸಮಾಜದ ಎಲ್ಲಾ ವರ್ಗಗಳ ಜನತೆಗೆ ಸಾಧ್ಯವಾಗದೇ ಇದು ಸಾಧ್ಯವಾಗುವ ಜನರ ಆರೋಗ್ಯವನ್ನು ಕಂಡು ‘ಹಾಲು ತುಪ್ಪದ ಕೊರತೆ ಇಲ್ಲದ ಮನೆ’ ಎಂಬ ಮಾತನ್ನು ಆಡಲಾಗುತ್ತದೆ.

ಹಾಲಿನಲ್ಲಿ ವಿಟಮಿನ್ ಎ, ಡಿ.ಇ ಮತ್ತು ಆರೋಗ್ಯಕರ ಕೊಬ್ಬಿನ ಆಮ್ಲಗಳು, ಅವಶ್ಯಕ ಷಕಾಂಶಗಳು, ಅಂಟಿ ಆಕ್ಸಿಡೆಂಟುಗಳಿವೆ. ಇದಕ್ಕೆ ಸೇರಿಸಿದ ಅರಿಶಿನ ಪೂಡಿ ಅಥವಾ ಜೇನು ಅಥವಾ ತುಪ್ಪ ಹಾಲಿನ ಗುಣಗಳನ್ನು ಇನ್ನಷ್ಟು ಹೆಚ್ಚಿಸಿ ಇದನ್ನೊಂದು ಅತ್ಯುತ್ತಮ ಶಿಲೀಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕ ಗುಣವುಳ್ಳ ಔಷಧಿಯನ್ನಾಗಿಸುತ್ತವೆ. ದಿನಕ್ಕೆ ಸುಮಾರು ಎರಡರಿಂದ ಮೂರು ಚಿಕ್ಕ ಚಮಚದಷ್ಟು ತುಪ್ಪವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಆರೋಗ್ಯ ವೃದ್ಧಿಸುತ್ತದೆ.

ಶುದ್ಧ ತುಪ್ಪದ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಬಗೆಯ ಪ್ರಯೋಜನಗಳಿವೆ. ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಜೀರ್ಣವ್ಯವಸ್ಥೆಯನ್ನು ಸ್ವಚ್ಛಗೊಳಿಸಿ ಕಲ್ಮಶಗಳನ್ನು ಹೊರಹಾಕುವುದು, ದೇಹದ ರಸದೂತಗಳು ಸರಿಯಾದ ಸಮಯಕ್ಕೆ ಅಗತ್ಯ ಮಾಣದಲ್ಲಿ ಸ್ರವಿಸಲ್ಪಡಲು ನೆರವಾಗುವುದು, ಮಲಬದ್ದತೆ ನಿವಾರಿಸಲು ನೆರವಾಗುವುದು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದು, ಮೂಳೆಗಳನ್ನು ದೃಢಗೊಳಿಸುವುದು ಮೊದಲಾದವು ಸೇರಿವೆ. ವಿಶೇಷವಾಗಿ ತುಪ್ಪ ಬೆರೆಸಿದ ಹಾಲಿನ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂದು ಲೈಂಗಿಕ ತಜ್ಞರು ವಿವರಿಸುತ್ತಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos