ದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಒಂದು ರೀತಿಯಲ್ಲಿ ಸುದ್ದಿ ಯಾಗುತ್ತಲೇ ಇರುತ್ತಾರೆ. ಈ ಹಿಂದೆ ಅದೆಷ್ಟೋ ಕೇಸ್ ಗಳನ್ನು ಹಾಕಿಸಿಕೊಂಡಿರುವ ರಣಾವತ್ ಅವರಿಗೆ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆಯನ್ನು ನೀಡಿದೆ.
ಯೆಸ್…ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದೆ. ಕಂಗನಾಳಿಗೆ ಅರ್ಜಿಯನ್ನು ಹಿಂತೆಗೆದುಕೊಂಡು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಇದಾದ ಬಳಿಕ ಅವರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡರು.
ಕಂಗನಾ ರಣಾವತ್ 2021ರಲ್ಲಿ ದೆಹಲಿ ಗಡಿಗಳಲ್ಲಿ ನಡೆದ ರೈತರ ಆಂದೋಲನದ ವೇಳೆ, ಮಹಿಂದರ್ ಕೌರ್ ಎಂಬ ವೃದ್ಧ ಮಹಿಳೆಯನ್ನು ಅವಹೇಳನಕಾರಿ ರೀತಿಯಲ್ಲಿ ಮರುಟ್ವೀಟ್ ಮಾಡಿದ್ದರು. ತಮ್ಮ ಟ್ವೀಟ್‌ನಲ್ಲಿ ಕೌರ್ ಅವರನ್ನು 100 ರೂ.ಗೆ ಬರುವಂತೆ ಹೋಲಿಕೆ ಮಾಡಿದ್ದರು. ಇದರಿಂದ ಕೌರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಮೊದಲು ಹೈಕೋರ್ಟ್ ಮೊರೆಹೋದ ಕಂಗನಾಳ ಅರ್ಜಿಯನ್ನು ಅಲ್ಲೇ ವಜಾಗೊಳಿಸಲಾಯಿತು. ನಂತರ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರು.
ನಿಮ್ಮ ಕಾಮೆಂಟ್‌ಗಳ ಅರ್ಥವೇನು..? ಇದು ಸರಳ ರೀಟ್ವೀಟ್ ಅಲ್ಲ. ನೀವು ನಿಮ್ಮದೇ ಆದ ಕಾಮೆಂಟ್ ಸೇರಿಸಿದ್ದೀರಿ, ಮಸಾಲೆ ಹಾಕಿದ್ದೀರಿ ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠ ಕಂಗನಾಳನ್ನು ಪ್ರಶ್ನಿಸಿತು. ಇದನ್ನೂ ಓದಿ: ಕಾಂಗ್ರೆಸ್ನವರು ಜಾತಿ ಜನಗಣತಿಯಂತಹ ಸ್ಕೀಮ್ ಹುಡುಕ್ತಾರೆ?: ಸಿ.ಟಿ. ರವಿ
ಕಂಗನಾಳ ವಕೀಲರು, ಆ ರೀಟ್ವೀಟ್ ಬಗ್ಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ವಾದಿಸಿದರೂ, ನ್ಯಾಯಾಲಯವು ‘ವಿಚಾರಣಾ ನ್ಯಾಯಾಲಯಕ್ಕೆ ಹೋಗಿ ಸ್ಪಷ್ಟನೆ ನೀಡಿ’ ಎಂದು ಸೂಚಿಸಿತು. ವಕೀಲರು ‘ಕಂಗನಾ ಪಂಜಾಬ್‌ಗೆ ಹೋಗುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದಾಗ, ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯುವ ಅವಕಾಶವಿದೆ ಎಂದು ಕೋರ್ಟ್ ತಿಳಿಸಿತು. ಆದರೆ, ಟ್ವೀಟ್ ಕುರಿತು ಸುಪ್ರೀಂ ಕೋರ್ಟ್‌ನ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದೆ.