ಪಠ್ಯಕ್ರಮದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ಅಳವಡಿಕೆಗೆ ಕ್ರಮ

ಪಠ್ಯಕ್ರಮದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ಅಳವಡಿಕೆಗೆ ಕ್ರಮ

ಯಲಹಂಕ, ಸೆ. 24: ಜಾಗತಿಕ ಔದ್ಯೋಗಿಕ ಬೇಡಿಕೆಗನುಗುಣವಾಗಿ ಕೌಶಲ್ಯ ಆಧಾರಿತ ಗುಣಮಟ್ಟದ ಶಿಕ್ಷಣವನ್ನು ಶಾಲಾ ಕಾಲೇಜು ಪಠ್ಯಕ್ರಮದಲ್ಲಿ ಅಳವಡಿಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಡಿಡ್ಯಾಕ್ ಇಂಡಿ

ಯಾ ಪ್ರಾಯೋಜಿತ ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ, ಐಡಿಎ ಎಂಎಚ್ಆರ್ ಡಿ, ನೀತಿ ಆಯೋಗ ಮತ್ತು ಎಂಎಸ್ ಡಿಇ ಹಾಗೂ ಎನ್ ಸಿಇಆರ್ ಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಶಿಕ್ಷಣ ಮತ್ತು ತರಬೇತಿ ಸಂಪನ್ಮೂಲಗಳಿಗೆ ಸಂಬಂಧಿಸಿದ ಏಷ್ಯಾ ಪೆಸಿಫಿಕ್ ನ ಪ್ರದರ್ಶನ ಮತ್ತು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಸಮ್ಮೇಳನ ಫಲಪ್ರದವಾಗಿದೆ ಎಂದು ತಿಳಿಸಿದರು.

ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಗುರುತರ ಗುರಿಯೊಂದಿಗೆ ಜಾಗತಿಕ ಶಿಕ್ಷಣ  ತಜ್ಞರನ್ನು ಒಗ್ಗೂಡಿಸಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದು ದೇಶದ ಪ್ರಗತಿಗೆ ಪೂರಕವಾಗಿರುವ ಹೊಸ ಆವಿಷ್ಕಾರ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಐಡಿಎ ಸಿಇಒ ಆದಿತ್ಯ ಗುಪ್ತಾ

ಅಫ್ಘಾನಿಸ್ತಾನ ಸಚಿವ ಅಬ್ದುಲ್ ತವಾಬ್ ಬಾಲ ಕರ್ಜಾಯ್, ಆಸ್ಟ್ರೇಲಿಯಾ ಸಚಿವ ಡಿ ರೈಟ್ ಆನ್ ಸೋಮ್ ಯೂರೆಕ್, ಸೌತ್ ಏಷ್ಯಾದ ರತ್ನೇಶ್ ಜಾ ಮೊದಲಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos