ರಾಜ್ಯಮಟ್ಟದ ಎನ್.ಎಸ್. ಎಸ್. ಪ್ರಶಸ್ತಿ ಪ್ರಧಾನ ಸಮಾರಂಭ!

ರಾಜ್ಯಮಟ್ಟದ ಎನ್.ಎಸ್. ಎಸ್. ಪ್ರಶಸ್ತಿ ಪ್ರಧಾನ ಸಮಾರಂಭ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎನ್ ಎಸ್ ಎಸ್ ನಲ್ಲಿ ಹಲವಾರು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ದೈಹಿಕ ಅವಮಾನಸಿಕ ಶಕ್ತಿಯನ್ನು ಸಹ ಬಲಪಡಿಸುತ್ತದೆ ಇದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ನಾವು ಎನ್ ಎಸ್ ಎಸ್ ಗೆ ಸೇರಿಕೊಳ್ಳುವುದರಿಂದ ನಮ್ಮ ಮುಂದಿನ ಜೀವನದಲ್ಲಿ ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಲು ಇದು ತುಂಬಾ ಉಪಯೋಗವಾಗುತ್ತದೆ. ರಾಜ್ಯಮಟ್ಟದ ಎನ್.ಎಸ್. ಎಸ್. ಪ್ರಶಸ್ತಿ ಪ್ರಧಾನ ಸಮಾರಂಭವು ಇಂದು ಬೆಂಗಳೂರು ನಗರದ ರಾಜಭವನದ ಬ್ಯಾಂಕ್ವೇಟ್ ಹಾಲ್ ನಡೆಯಿತು ಈ ಕಾರ್ಯಕ್ರಮದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಮತ್ತು ವಿಧಾನಸಭಾ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜ್ ರವರು ಭಾಗವಹಿಸಿ ರಾಜ್ಯದಲ್ಲಿ 65 ವಿಶ್ವವಿದ್ಯಾಲಯ ಮತ್ತು 4 ನಿರ್ದೇಶನಾಲಯಗಳ ಪೈಕಿ 2 ಅತ್ಯುತ್ತಮ ವಿಶ್ವವಿದ್ಯಾಲಯ /ನಿರ್ದೇಶನಾಲಯ 12 ಅತ್ಯುತ್ತಮ ಸ್ವಯಂ ಸೇವಕ / ಸೇವಕಿಯರಿಗೆ ಒಟ್ಟು 26 ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು.
ಈ ಸಂಧರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ರಾಜ್ಯ ಎನ್. ಎಸ್. ಎಸ್. ಅಧಿಕಾರಿ ಪ್ರತಾಪ್ ಲಿಂಗಯ್ಯ, ಎನ್. ಎಸ್. ಎಸ್ ಪ್ರಾದೇಶಿಕ ಅಧಿಕಾರಿ ಕಾರ್ತಿಗೇಯನ್ ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos