ಬೆಂಗಳೂರು, ಆ.05: ಹಜ್ರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ವೇದಿಕೆ ವತಿಯಿಂದ ರದ್ದುಗೋಳಿಸಿದ ಟಿಪ್ಪುಸುಲ್ತಾನ್ ಜಯಂತಿಯನ್ನು ಮಾಮೂಲಿಯಂತೆ ಜನ್ಮ ದಿನವನ್ನು ಆಚರಿಸುವಂತೆ ರಾಜ್ಯಾಧ್ಯಕ್ಷ ಸರದಾರ ಅಹ್ಮದ್ ಖುರೇಶಿ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸುಮಾರು ೨೫೦ ವರ್ಷಗಳ ಕಾಲ ಬ್ರಿಟಿಷರ ದಾಸ್ಯತ್ವಕ್ಕೆ ಶರಾಣಾದ ಭಾರತಾಂಬೆಗೆ ಸ್ವಾತಂತ್ರ ಕೊಡಿಸುವ ಸಲುವಾಗಿ ತಮ್ಮ ಪ್ರಾಣವನು ಒತ್ತೆ ಇಟ್ಟು ೪ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ರಣರಂಗದಲ್ಲೇ ಹುತಾತ್ಮನಾದ ಇಂತಹ ಸಪೂತರು ಈ ಹಿಂದೆಯಾಗಲಿ ಹುಟ್ಟಿಲ್ಲ ಇನ್ನು ಮುಂದೆ ಹುಟ್ಟುವುದಿಲ್ಲ.
ಟಿಪ್ಪುವಿನ ಚರಿತ್ರೆ ಸದಾಕಾಲ ನಮ್ಮ ಮುಂದೆ ಉಜ್ವಲ ಭವಿಷ್ಯದಂತಿದೆ. ಯವ ಪೀಳಿಗೆಗೆ ಶಕ್ತಿ ಸಾಮರ್ಥ್ಯ ಮತ್ತು ಅನ್ಯಾಯದ ವೀರುದ್ಧ ಹೋರಾಡಲು ಅದು ದಾರಿದೀಪವಾಗಿರುತ್ತದೆ, ಈ ಕಾರಣದಿಂದಾಗಿ ಮುಖ್ಯಮಂತ್ರಿ ಬಿ.ಎಎಸ್. ಎಡಿಯೂರಪ್ಪ ರವರು ಅಂತರಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ಪ್ರಥಮ ಸ್ವಾತಂತ್ರ್ಯಯ ಹೋರಾಟಗಾರ ಕನ್ನಡನಾಡಿನ ವೀರ ಸುಪುತ್ರ ಮೈಸೂರು ಹುಲಿಯ ವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು, ಸಂಚು ಹೂಡಿತ್ತಿರುವುದನ್ನು ನಲ್ಲಿಸಿ ವಿವಿಧ ಧರ್ಮದ ಸ್ವಾತಂತ್ರ್ಯ ಹೋರಟಗಾರರಿಗೆ ಸಲ್ಲಿಸಿತ್ತಿರುವ ಗೌರವಾರ್ಪಣೆಯನ್ನು ಟಿಪ್ಪುಸುಲ್ತಾನರಿಗೂ ಸಹ ಸಲ್ಲಿಸಬೇಕು.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕೂಡಲೇ ರದ್ದು ಗೊಳಿಸಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ಪುನಃ ಮಾಮೂಲಿನಂತೆ ಜಯಂತಿಯನ್ನು ಆಚರಿಸಬೇಕೆಂದು ಸಮಸ್ತ ಪ್ರಗತಿಪರ ಒಕ್ಕೂಟದ ವತಿಯಿಂದ ಒತ್ತಾಯಿಸಿದರು.