ಕೊಲಂಬೋ, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದ ಈ ವಾರಾಂತ್ಯದಲ್ಲಿ ಫ್ಯಾನಿ ಚಂಡ ಮಾರುತವು ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ಶ್ರೀಲಂಕಾವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅತಿ ಹೆಚ್ಚು ಉಷ್ಣಾಂಶದಿಂದಾಗಿ ಗಾಳಿಯಲ್ಲಿ ಏರುಪೇರು ಉಂಟಾಗಿ ಅದು ಚಂಡಮಾರುತವಾಗಿ ಪರಿವರ್ತನೆಗೊಳ್ಳುತ್ತವೆ. ಈಗಾಗಲೇ ಗಜ ಚಂಡಮಾರುತದಿಂದ ತಮಿಳುನಾಡು ಚೇತರಿಸಿಕೊಂಡಿದೆ. ಈಗ ಮತ್ತೊಂದು ಚಂಡ ಮಾರುತ ಅಪ್ಪಳಿಸುವ ಮುನ್ಸೂಚನೆ ದೊರೆತಿದೆ.
ಏ.26 ಅಥವಾ ಏ.27ರಂದು ಚಂಡ ಮಾರುತವು ಶ್ರೀಲಂಕಾ ಪ್ರವೇಶಿಸಲಿದೆ. ಬಂಗಾಳಕೊಲ್ಲಿಗೆ ಶ್ರೀಲಂಕಾ ಹತ್ತಿರವಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಬಳಿಕ ಏ.28ರಂದು ದಕ್ಷಿಣ ಭಾರತವನ್ನು ಪ್ರವೇಶಿಸಲಿದೆ. ಮುಂದಿನ 24 ಗಂಟೆ ಶ್ರೀಲಂಕಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.