ಮಹದೇವಪುರ, ಸೆ. 1: ಭಗವದ್ಗೀತೆ ಹುಟ್ಟಿದ ನಂತರ ಶ್ರೀಕೃಷ್ಣ ಸಮಾನ್ಯ ಮನುಷ್ಯ ಅಲ್ಲವೆಂದು ಜ್ಞಾನಿಗಳು ಗ್ರಹಿಸಿದ್ದು, ಅಂದಿನಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಆರಂಬಿಸಲಾಗಿದೆ ಎಂದು ಇಂದೂ ಜ್ಞಾನ ವೇದಿಕೆ ಪದಾದಿಕಾರಿಗಳಾದ ಪ್ರಕಾಶ್ರೆಡ್ಡಿ ತಿಳಿಸಿದರು.
ಕ್ಷೇತ್ರದ ತೂಬರಹಳ್ಳಿಯ ತಿರುಮಲ ದೇವಸ್ಥಾನದ ಹತ್ತಿರ ಪ್ರಬೋಧ ಸೇವಾ ಸಮಿತಿ, ಇಂದು ಜ್ಞಾನ ವೇದಿಕೆ ಹಾಗು ಬೆಂಗಳೂರು ಶಾಖೆ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಣೆಯಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಶ್ರೀಕೃಷ್ಣನು ಕ್ರಿಸ್ತ ಪೂರ್ವ 3228 ನೇ ಯ ವರ್ಷ ಜುಲೈ ತಿಂಗಳು 19 ನೇಯ ತಾರೀಖು ಅಷ್ಟಮಿ ದಿನ ವೃಷಭಲಗ್ನದಲ್ಲಿ ಜನಿಸಿರುತ್ತಾನೆ ಎಂದರು. ಶ್ರೀಕೃಷ್ಣ ತಿಳಿಸಿದಂತೆ ಧರ್ಮಾಚರಣೆ ಹೊಂದಿದವರನ್ನು ಸಂರಕ್ಷಿಸುವುದಕ್ಕೂ, ಅಧರ್ಮ ಆಚರಣೆ ಹೊಂದಿದವರನ್ನು ಇಲ್ಲದಂತೆ ಮಡುವುದಕ್ಕೂ ಧರ್ಮ ಸಂಸ್ಥಾಪನೆ ಮಾಡಲು ಎಲ್ಲಾ ಯುಗದಲ್ಲಿ ಹುಟ್ಟುತ್ತೆನೆ ಎಂದು ತಿಳಿಸಿದ್ದರು.
ಯಾವಾಗ ಧರ್ಮಗಳಿಗೆ ಗ್ಲಾನಿ
ಅಧರ್ಮ ವೃದ್ದಿ ಹೊಂದಿತ್ತಿದೆಯೇ ಆಗ ಶ್ರೀಕೃಷ್ಣ ಭೂಮಿ ಮೇಲೆ ಹುಟ್ಟುತ್ತಾನೆ ಎಂದರು. ಶ್ರೀಕೃಷ್ಣರ ನಿಜವಾದ ಭಾವವನ್ನು ತಿಳಿಯಲು ಎಲ್ಲರೂ ಭಗವದ್ಗೀತೆಯನ್ನು ಓದಲು ತಿಳಿಸಿದರು. ಶ್ರೀಕೃಷ್ಣ ಭಗವಾನರ ಜನ್ಮದಲ್ಲಿ ನಮಗೆ ಕಾಣಿಸುವ ನವಿಲುಗರಿ, ಮುರಳಿ, ನೀಲಿಬಣ್ಣದ ಶರೀರ, ನಿಂತಿರುವ ಪಾದಗಳು, ಶಂಖು ಚಕ್ರ ನಾಮ ಮುಂತಾದುವುಗಳ ಆದ್ಯಾತ್ಮಿಕ ಸಾರಾಂಶವನ್ನು ತಿಳಿಯುವುದಕ್ಕೆ ದೇವಾಲಯ ಗ್ರಂಥವನ್ನು ಓದಲು ತಿಳಿಸಿದರು. ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರ ದಿವ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಣೆ ಅಂಗವಾಗಿ ಶ್ರೀಕೃಷ್ಣರ ಮೂರ್ತಿಯನ್ನು ತೂಬರಹಳ್ಳಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಬದಲ್ಲಿ ತ್ರೈತ ಸಿದ್ದಂತ ಭಗವದ್ಗೀತೆ ಸೇವಾ ಟ್ರಸ್ಟ್ ಪದಾದಿಕಾರಿಗಳಾದ ಶ್ರೀದೇವಿ, ನಾರಾಯಣರೆಡ್ಡಿ, ಮನೋಹರ್, ಅಶೋಕ್, ಚಂದ್ರು ಮುಂತಾದವರು ಹಾಜರಿದ್ದರು.