ವಿಶೇಷ ಒಲಿಂಪಿಕ್ಸ್: 362 ಪದಕ ಗೆದ್ದ ಭಾರತ

ವಿಶೇಷ ಒಲಿಂಪಿಕ್ಸ್: 362 ಪದಕ  ಗೆದ್ದ ಭಾರತ

ಅಬುದಾಬಿ, ಮಾ. 21, ನ್ಯೂಸ್ ಎಕ್ಸ್ ಪ್ರೆಸ್: 2019ರ ಸಾಲಿನ ವಿಶೇಷ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್  ಟೂರ್ನಿಯಲ್ಲಿ ಭಾರತವು 350ಕ್ಕೂ ಹೆಚ್ಚು ಪದಕಗಳನ್ನು ಜಯಿಸುವ ಮೂಲಕ ಸಾಧನೆ ಮಾಡಿದೆ.

ಯುಎಇ ದೇಶದ ಅಬುದಾಬಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ನಿರ್ಮಿಸಿದ್ದು, ಇದುವರೆಗೆ ಭಾರತೀಯ ಕ್ರೀಡಾಪಟುಗಳು 85 ಚಿನ್ನ, 153 ಬೆಳ್ಳಿ ಹಾಗೂ 124 ಕಂಚಿನ ಪದಕಗಳು ಸೇರಿದಂತೆ ಒಟ್ಟು 362 ಪದಕಗಳು ಗೆದ್ದುಕೊಂಡಿದ್ದಾರೆ.

ಇಂದು ಸಂಜೆ ಕ್ರೀಡಾಕೂಟಕ್ಕೆ ತೆರೆಬೀಳಲಿದ್ದು, ಝಾಯೆದ್ ಸ್ಪೋರ್ಟ್ ಮೈದಾನದಲ್ಲಿ ವಿಶ್ವದ ಪ್ರಸಿದ್ಧ ಸಂಗೀತಗಾರರು ಕಾರ್ಯಕ್ರಮ ನೀಡಲಿದ್ದಾರೆ. ವರ್ಷದ ಅತಿದೊಡ್ಡ ಕ್ರೀಡಾಜಾತ್ರೆಯಲ್ಲಿ ಅಥ್ಲೀಟ್’ಗಳು ಹಾಗೂ ಕೋಚ್’ಗಳು ಪರೇಡ್’ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos