ಶೀಘ್ರ ರಿಲೀಸ್ ಆಗಲಿದೆ `ತಾನಾಜಿ’

ಶೀಘ್ರ ರಿಲೀಸ್ ಆಗಲಿದೆ `ತಾನಾಜಿ’

ಬೆಂಗಳೂರು, ಡಿ. 25: ಬಾಲಿವುಡ್ ಆ್ಯಕ್ಷನ್ ಕಿಂಗ್ ಅಜಯ್ ದೇವಗನ್ ನಾಯಕನಾಗಿ ನಟಿಸಿ, ನಿರ್ಮಿಸಿರುವ ಸಿನಿಮಾ `ತಾನಾಜಿ’. ಮರಾಠ ಸಾಮ್ರಾಜ್ಯದ ವೀರ ತಾನಾಜಿ ಜೀವನಾಧಾರಿತವಾದ ಈ ಚಿತ್ರಕ್ಕೆ ಓಂ ರಾವತ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ವಿಶೇಷ ಅಂದ್ರೆ ಚಿತ್ರದಲ್ಲಿ ನಟಿ ಕಾಜಲ್, ತಾನಾಜಿ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಶರದ್ ಕೇಲ್ಕರ್ ಛತ್ರಪತಿ ಶಿವಾಜಿ ಮಹಾರಾಜನ ಪಾತ್ರದಲ್ಲಿ ನಟಿಸಿದ್ದು, ಸೈಫ್ ಅಲಿ ಖಾನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಅದರ ಬೆನ್ನಲ್ಲೇ ತಾನಾಜಿಯ ಪರಾಕ್ರಮವನ್ನು ಹೊಗಳುವ `ಘಮಂಡ್ ಕರ್…’ ಎಂಬ ಸಾಂಗ್ ಈಗಾಗಲೇ ಲಾಂಚ್ ಮಾಡಿರುವ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ.

ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಬ್ಲಾಕ್ ಬ್ಯೂಟಿ ಕಾಜೋಲ್‌ಗೆ ಐತಿಹಾಸಿಕ ಚಿತ್ರದಲ್ಲಿ ನಟಿಸುವುದು ಸವಾಲಿನ ವಿಷಯವೇ. ಆದರೆ ಟ್ರೈಲರ್ ಹಾಗೂ ಪ್ರೋಮೊಗಳನ್ನು ನೋಡಿದರೆ, ಕಾಜೋಲ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎಂದೆನಿಸುತ್ತಿದೆ. ಬಹುನಿರೀಕ್ಷಿತ ಈ  ಸಿನಿಮಾ 2020ರ ಜನವರಿ 1೦ರಂದು ರಿಲೀಸ್ ಆಗಲಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos