ಬೆಂಗಳೂರು, ಡಿ. 24: ಸಾಮಾನ್ಯವಾಗಿ ನಾವೆಲ್ಲರು ಕಡಲೆಕಾಳಿನಿಂದ ಹಲವಾರು ಕರಿದ ತಿಂಡಿ ತಿನಿಸುಗಳನ್ನ ಮಾಡುವುದರ ಜೊತೆಗೆ ಪಲ್ಯ ಮಾಡುತ್ತೇವೆ, ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಇನ್ನೂ ಅದೆಷ್ಟೋ ಆಹಾರಗಳಲ್ಲಿ ಕಡಲೆ ಬಳಸುತ್ತಾರೆ. ಅದನ್ನು ಹೇಗೆ ಬಳಸಿದರೂ ಮೊದಲು ಕೆಲವು ಗಂಟೆಗಳ ಕಾಲ ಅವನ್ನು ನೀರಿನಲ್ಲಿ ನೆನೆಸಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಆದರೆ ಕಡಲೆಯನ್ನು ನೆನೆಸಿದ ಬಳಿಕ ಅವುಗಳನ್ನು ತೆಗೆದು ನೀರನ್ನು ಬಿಸಾಕುತ್ತಾರೆ.
ಕಡಲೆಕಾಳು ನೆನೆಸಿದ ನೀರನ್ನು ಕುಡಿದರೆ ಅದರಲ್ಲಿ ಇರುವ ಐರನ್ ದೇಹಕ್ಕೆ ಸಿಗುತ್ತದೆ. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗುವುದಷ್ಟೇ ಅಲ್ಲ, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಈ ನೀರನ್ನು ಕುಡಿದರೆ ದೇಹದಲ್ಲಿನ ಇರುವ ಕೆಟ್ಟ ಕೊಲೆಸ್ಟರಾಲ್ ನಿವಾರಣೆಯಾಗುತ್ತದೆ. ಒಳ್ಳೆಯ ಕೊಲೆಸ್ಟರಾಲ್ ಬೆಳೆಯುತ್ತದೆ. ಇದರಿಂದ ಅಧಿಕ ತೂಕ ಕಡಿಮೆಯಾಗುತ್ತದೆ. ಹೃದಯ ಸಮಸ್ಯೆಗಳು ಬರುವುದಿಲ್ಲ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ.
ವ್ಯಾಯಾಮ ಮಾಡುವವರು ಈ ನೀರು ಕುಡಿದರೆ ಉತ್ತಮ. ಸ್ನಾಯುಗಳು ಶೀಘ್ರವಾಗಿ ಬೆಳೆಯುತ್ತವೆ. ಹೊಸ ಕಣಜಾಲ ನಿರ್ಮಾಣವಾಗುತ್ತದೆ. ಸ್ನಾಯುಗಳು ಬಿಲ್ಡ್ ಆಗುತ್ತವೆ. ದೈಹಿಕವಾಗಿ ದೃಢವಾಗುತ್ತಾರೆ.
ಕಡೆಲೆಯನ್ನು ನೆನೆಸಿದ ನೀರು ಮಧುಮೇಹ ಇರುವವರಿಗೆ ಔಷಧಿ ಎಂದೇ ಹೇಳಬಹುದು. ಈ ನೀರನ್ನು ಕುಡಿದರೆ ಅವರಲ್ಲಿ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ. ಶುಗರ್ ಇರುವವರು ಈ ಕುಡಿಯುವುದರಿಂದ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ. ರಾತ್ರಿ ಪೂರ್ತಿ ನೆನೆಸಿದ ಕಡಲೆಕಾಳುಗಳ ಸೇವನೆಯಿಂದ ಶಕ್ತಿ ಬರುತ್ತದೆ. ಅನೇಕ ರೋಗಗಳಿಂದ ಮುಕ್ತಿ ಹೊಂದಬಹುದು. ಒಂದು ಚಮಚ ಸಕ್ಕರೆ ಜೊತೆಗೆ ಕಡಲೆಕಾಳು ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯ ಉತ್ಪತ್ತಿ ವೃದ್ದಿಯಾಗುತ್ತದೆ.