ಬಿಳಿ ನಾಗರಹಾವು ಪ್ರತ್ಯೇಕ್ಷ

ಬಿಳಿ ನಾಗರಹಾವು ಪ್ರತ್ಯೇಕ್ಷ

ಬೆಂಗಳೂರುಮೇ. 25, ನ್ಯೂಸ್ಎಕ್ಸ್ ಪ್ರೆಸ್‍:  ನಗರದಲ್ಲಿ ಅಪರೂಪದ ಬಿಳಿ ನಾಗರಹಾವೊಂದು ಪತ್ತೆಯಾಗಿದೆ. ಜ್ಯುಡಿಶಿಯಲ್‌ ಲೇಔಟ್​ನಲ್ಲಿ ಸುಮಾರು 6 ಅಡಿ ಉದ್ದವಿರುವ ಬಿಳಿ‌ ನಾಗರಹಾವು ಕಾಣಿಸಿದೆ. ಈ ಅಪರೂಪದ ಹಾವನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ಸಿಬ್ಬಂದಿ ಮೋಹನ್ ರಕ್ಷಣೆ ಮಾಡಿದ್ದಾರೆ. ಸದ್ಯ ಮೋಹನ್ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಬಿಳಿ ನಾಗರಹಾವುಗಳನ್ನ ಅಲ್ಬಿನೋ ನಾಗರಹಾವು ಅಥವಾ ಲ್ಯೂಸಿಟಿಕ್​ ನಾಗರಹಾವು ಅಂತ ವಿಂಗಡಿಸಲಾಗುತ್ತದೆ. ಇವು ಕಾಣಸಿಗೋದು ತುಂಬಾ ವಿರಳ. ಹಾವೊಂದೇ ಅಲ್ಲ, ಯಾವುದೇ ಪ್ರಾಣಿ ತನ್ನ ನೈಸರ್ಗಿಕ ಚರ್ಮದ ಬಣ್ಣದ ಬದಲು ಸಂಪೂರ್ಣವಾಗಿ ಅಥವಾ ಭಾಗಶಃ ಬಿಳಿಯದಾಗಿದ್ದಾಗ ಅವನ್ನು ಅಲ್ಬಿನೋ ಪ್ರಾಣಿಗಳು ಅಥವಾ ಲ್ಯೂಸಿಟಿಕ್ ಪ್ರಾಣಿಗಳು ಎಂದು ಕರೆಯಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos