ಕಂದಮ್ಮನನ್ನು ಹೂಳಲು ತಂದ ಪಾಪಿಗಳು

ಕಂದಮ್ಮನನ್ನು  ಹೂಳಲು ತಂದ ಪಾಪಿಗಳು

ಹೈದರಾಬಾದ್ , ನ.1 : ಇಬ್ಬರು ವ್ಯಕ್ತಿಗಳು ನವಜಾತ ಹೆಣ್ಣುಮಗುವನ್ನು ಜೀವಂತವಾಗಿ ಹೂಳಲು ಮುಂದಾದ ಘಟನೆ ಹೈದರಾಬಾದ್ ನ ಜುಬಲಿ ಬಸ್ ನಿಲ್ದಾಣದ ಬಳಿ ನಡೆದಿದೆ. ಇಬ್ಬರು ವ್ಯಕ್ತಿಗಳು ಚೀಲವೊಂದನ್ನು ತೆಗೆದುಕೊಂಡು ಬಂದು ಬಸ್ ನಿಲ್ದಾಣದ ಬಳಿ ಗುಂಡಿ ತೆಗೆಯುತ್ತಿರುವುದನ್ನ ಕಂಡ ಆಟೊ ಚಾಲಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಗಳನ್ನು ವಿಚಾರಿಸಿದಾಗ ಮಗು ಸತ್ತು ಹೋಗಿದ್ದ ಕಾರಣ ಅದನ್ನು ಹೂಳಲು ಬಂದಿರುವುದಾಗಿ ಹೇಳಿದ್ದಾರೆ. ಅವರ ಮಾತಿನಿಂದ ಅನುಮಾನಗೊಂಡ ಪೊಲೀಸರು ಚೀಲ ತೆರೆದು ನೋಡಿದಾಗ ಮಗು ಇನ್ನು ಜೀವಂತವಾಗಿರುವುದು ತಿಳಿದುಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos