ಬೆಂಗಳೂರು,ನ. 25 : ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸಿಸುವ ಜನರೇ ಎಚ್ಚರವಾಗಿರಿ. ಯಾಕೆಂದರೆ ಸ್ವಚ್ಛ ಮಾಡುವಾಗ ಅಚಾನಕ್ಕಾಗಿ ಕೆರೆಕೋಡಿ ಒಡೆದಿದೆ. ನೀರು ಬೃಹತ್ ಪ್ರಮಾಣದಲ್ಲಿ ಹರಿದು ಹೊರಬರುತ್ತಿದ್ದು, ಕೋಡಿ ಮುಚ್ಚಲು ಸಾಧ್ಯವೇ ಇಲ್ಲ. ಕೆರೆ ಒಡೆದು ನಿಮ್ಮ ಮನೆಯೂ ಮುಳಗೀತು. ಆದ ಕಾರಣ ಎಚ್ಚರದಿಂದ ಇರಿ. ಮಳೆಯ ಕಿರಿಕಿರಿ ಇಲ್ಲ . ಊಟ ಮಾಡಿ ಅನೇಕರು ನಿದ್ರಿಗೆ ಜಾರಿದ್ದರು. ಇನ್ನೂ ಕೆಲವರು ಶಾಪಿಂಗ್ ತೆರಳಲು ಅಣಿಯಾಗಿದ್ದರು. ಆದರೆ, ನೋಡ ನೋಡುತ್ತಿದ್ದಂತೆ ಮನೆಗಳಿಗೆ ನೀರು ನುಗ್ಗಿತ್ತು.
ಜಲಪ್ರಳಯವಾಯಿತೇ ಎಂದು ಅನೇಕರು ದಂಗು ಬಡಿದಿದ್ದರು. ನೋಡಿದರೆ ಹುಳಿಮಾವು ಕೆರೆ ಕೋಡಿ ಒಡೆದಿತ್ತು. 250ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾದವು.ನೀರು ನುಗ್ಗಿದ ಪ್ರದೇಶಗಳಿಂದ ಹಾನಿಗೊಳಗಾದವರಿಗೆ ಉಳಿದಕೊಳ್ಳಲು ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು.ಬಿಡಿಎ ಭಾನುವಾರ ಹುಳಿಮಾವು ಕೆರೆ ಸ್ವಚ್ಛತಾ ಕಾರ್ಯ ನಡೆಸಿತ್ತು. ಕೆರೆಯನ್ನು ಸ್ವಚ್ಛಗೊಳಿಸುವ ವೇಳೆ ಕೋಡಿ ಒಡೆದಿದೆ. ಪರಿಣಾಮ ಕೆರೆ ಪಕ್ಕದ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದೆ. ಸಾಕಷ್ಟು ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ. ನೀರು ನುಗ್ಗಿದ ಪರಿಣಮಾ 250 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಸಾಕಷ್ಟು ಕಾರು-ಬೈಕ್ಗಳು ನೀರಿನಲ್ಲಿ ಮುಳುಗಿ ಹೋಗಿವೆ. ತೊಡಲು ಬಟ್ಟೆ ಇಲ್ಲದೆ, ಹೊಟ್ಟೆಗೆ ಊಟವಿಲ್ಲದೆ ಹುಳಿಮಾವು ಜನರು ಬೀದಿಗೆ ಬಿದ್ದಿದ್ದಾರೆ.